ಬೆಳೆ ನಿರ್ವಹಣೆಯಿಂದ ಇಳುವರಿ ಹೆಚ್ಚಳ

MDG kru
ಮೂಡಿಗೆರೆ ಕೆವಿಕೆಯಲ್ಲಿ ನಡೆದ ತೋಟಗಾರಿಕಾ ಬೆಳೆಯಲ್ಲಿ ಸಮಗ್ರ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ತರಬೇತಿಯಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣವ ಪತ್ರ ನೀಡಲಾಯಿತು. ಡಿ.ಎಲ್.ಅಶೋಕ್‌ಕುಮಾರ್, ವಿ.ಶ್ರೀನಿವಾಸ್, ಎ.ಟಿ.ಕೃಷ್ಣಮೂರ್ತಿ, ಎಂ.ಎಚ್.ಸುಚಿತ್ರಾಕುಮಾರಿ, ಎಂ.ಎಸ್.ಪಲ್ಲವಿ, ಪ್ರಶಾಂತ್, ಸೈಯದ್ ಇಮ್ರಾನ್ ಇತರರಿದ್ದರು.
Published on

ಮೂಡಿಗೆರೆ: ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚು ಇಳುವರಿ ಪಡೆಯಲು ಬೆಳೆ ನಿರ್ವಹಣಾ ಪದ್ಧತಿ ಅವಶ್ಯ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಹೇಳಿದರು.

ಹ್ಯಾಂಡ್‌ಪೋಸ್ಟ್‌ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ಸಾವಯುವ ಕೃಷಿ ಸಂಶೋಧನಾ ಕೇಂದ್ರ, ಕೆವಿಕೆಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಸೋಮವಾರ ನಡೆದ ತರಬೇತಿಯಲ್ಲಿ ಮಾತನಾಡಿದರು.
ತೋಟಗಾರಿಕಾ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಕಡಿಮೆ ಭೂಮಿ ಇದ್ದರೂ ಬೆಳೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಪ.ಜಾತಿಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆಅಧಿಕವಿದೆ. ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯಲು ಇಂಥ ತರಬೇತಿಗಳು ಉಪಯುಕ್ತ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ. ವಿ.ಶ್ರೀನಿವಾಸ್ ಮಾತನಾಡಿ, ಕೀಟ ಹಾಗೂ ವಿವಿಧ ರೀತಿಯ ರೋಗಗಳನ್ನು ಗುರುತಿಸಿ ಸರಿಯಾದ ಸಮಯದಲ್ಲಿ ಅಗತ್ಯ ಕ್ರಮಗಳನ್ನು ಅನುಸರಿಸಿದರೆ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಮೂಡಿಗೆರೆ ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಪರಿಶಿಷ್ಟ ಸಮುದಾಯದ ರೈತರು ಸಮಗ್ರ ಕೃಷಿಯಲ್ಲಿ ಯಶಸ್ಸು ಕಾಣಬೇಕಾದರೆ ಕೆವಿಕೆಯಲ್ಲಿ ಆಗಾಗ ನಡೆಯುವ ತರಬೇತಿಯಲ್ಲಿ ಭಾಗವಹಿಸಿ ಕೃಷಿ ಸಂಬಂಧಿತ ವಿಚಾರಗಳನ್ನು ತಿಳಿದುಕೊಂಡು ಅನುಸರಿಸಬೇಕು ಎಂದು ಹೇಳಿದರು.
ಕೆವಿಕೆ ವಿಜ್ಞಾನಿಗಳಾದ ಎಂ.ಎಚ್.ಸುಚಿತ್ರಾಕುಮಾರಿ, ಎಂ.ಎಸ್.ಪಲ್ಲವಿ, ಪ್ರಶಾಂತ್, ಸುರೇಶ್, ಗಣೇಶ್, ಸೆಯ್ಯದ್ ಇಮ್ರಾನ್ ತರಬೇತಿ ನಡೆಸಿಕೊಟ್ಟರು. 35 ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net