

ರಬಕವಿ-ಬನಹಟ್ಟಿ; ಜನರ ಸೇವೆ ಮಾಡುವ ಮೂಲಕ ಜನತೆಯ ವಿಶ್ವಾಸ ಪಡೆದುಕೊಂಡು ಸಂಘ-ಸಂಸ್ಥೆಗಳು ಕೆಲಸ ನಿರ್ವಹಿಸಬೇಕೆಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ನಡೆದ ರಾಣಿ ಚನ್ನಮ್ಮ ಸೌಹಾರ್ದ ಬ್ಯಾಂಕ್ 9ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಸಂಘಗಳು ಸಾಮಾನ್ಯ ಸದಸ್ಯರ ಮತ್ತು ಗ್ರಾಹಕರ ಆರ್ಥಿಕ ಪ್ರಗತಿಗೆ ನೆರವಾಗುವತ್ತ ಪ್ರಾಮಾಣಿಕ ಸೇವೆ ನೀಡಬೇಕು. ಗ್ರಾಹಕರೊಡನೆ ಸೌಜನ್ಯಯುತ ನಡವಳಿಕೆ ಹಾಗೂ ಆಡಳಿತ ಮಂಡಳಿ ಸಹಕಾರ ಸಂಸ್ಥೆಗಳ ಪ್ರಗತಿಗೆ ಪೂರಕವಾಗುತ್ತವೆ. ಪ್ರಸಕ್ತ ವರ್ಷ ಬ್ಯಾಂಕ್ 32 ಲಕ್ಷ ರೂ. ಲಾಭ ಹೊಂದಲು ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವೇ ಕಾರಣವೆಂದರು.
ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿ ಸಂಗಮೇಶ ನಿರಾಣಿ, ಬಸಯ್ಯ ಹಿರೇಮಠ, ಆಡಳಿತ ಮಂಡಳಿ ಅಧ್ಯಕ್ಷ ಹಣಮಂತ ಸವದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಜನವಾಡ, ಗ್ರಾಪಂ ಅಧ್ಯಕ್ಷ ಸದಾಶಿವ ಸವದಿ, ಎಂ.ಆರ್.ವಾಲಿ, ಮಲ್ಲಪ್ಪ ಗಣಿ, ಗುರುಪಾದಯ್ಯ ಮರಡಿಮಠ, ದಾನಪ್ಪ ಆಸಂಗಿ, ಲಕ್ಷ್ಮಣ ಸವದಿ, ಶೇಖರ ನೀಲಕಂಠ, ವಿಠಲ ಜನವಾಡ, ಈರಪ್ಪ ಕಡಕಭಾಂವಿ, ವ್ಯವಸ್ಥಾಪಕ ಕುಮಾರ ಸವದಿ, ಸದಾಶಿವ ಮಗದುಮ್, ಬಸಪ್ಪ ಶೇಗುಣಸಿ ಇದ್ದರು.