

ಸಾಗರ: ಆಧುನಿಕ ತಂತ್ರe್ಞÁನದ ವ್ಯವಸ್ಥಿತ ಬಳಕೆಗಿಂತ ತಪ್ಪು ದಾರಿಗೆ ಬಳಸಿಕೊಳ್ಳುವುದೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಯುವ ಜನರಿಗೆ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ನಗರಸಭಾ ಸದಸ್ಯ ಟಿ.ಡಿ.ಮೇಘರಾಜ್ ಹೇಳಿದರು.
ನಗರದಲ್ಲಿ ಶನಿವಾರ ನೂತನವಾಗಿ ಆರಂಭವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂಸ್ಥೆ ಸಾಗರಿಕ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರೊನಾದ ಪೂರ್ವದಲ್ಲಿದ್ದ ಸ್ಥಿತಿ ಈಗಿಲ್ಲ. ದೊಡ್ಡವರೇ ಮಕ್ಕಳ ಕೈನಲ್ಲಿ ಮೊಬೈಲ್ ಕೊಟ್ಟು ಇದು ಅನಿವಾರ್ಯ ಎನ್ನುವಂತೆ ಮಾಡಿದ್ದೇವೆ. ಪ್ರಸ್ತುತ ಅದರ ವಿರುದ್ಧ ಈಜುವ ಸವಾಲು ನಮ್ಮ ಮೇಲಿದೆ. ಈ ಸಂದರ್ಭದಲ್ಲಿ ನಮ್ಮ ಸಂಸ್ಕತಿಯ ಗಟ್ಟಿತನವನ್ನು ಬಿಂಬಿಸುವ ಸಂಘಟನೆಗಳ ಅಗತ್ಯವಿದೆ. ಎಲ್ಲ e್ಞÁನವೂ ಮೊಬೈಲ್‌ನಲ್ಲಿಯೇ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಪುಸ್ತಕ ಓದುವ ಪರಂಪರೆ ಕ್ಷೀಣಿಸುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದರು.
ಶಿಕ್ಷಣ ತಜ್ಞ ಡಾ. ಶಂಕರಶಾಸ್ತಿç ಮಾತನಾಡಿ, ನಾಟಕ ಎಂದರೆ ಈ ಸಮಾಜದ ರೂಢಿ, ಸಂಸ್ಕೃತಿ. ಅದನ್ನು ಮೂಲದಲ್ಲಿ ರೂಢಿಸಿದವರು ಮಹಿಳೆಯರು ಎನ್ನುವ ಸತ್ಯ ಎಂದಿಗೂ ಮರೆಯಬಾರದು. ಈಗ ಮತ್ತೆ ಮಹಿಳೆಯರೇ ಚಾಲ್ತಿಗೆ ತಂದಿದ್ದಾರೆ ಎಂದರು.
ಇದೇ ವೇಳೆ ರಂಗಕಲಾವಿದೆ ಸ್ವಯಂಪ್ರಭ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಚಾಲಕಿ ಸರಿತಾ ಎಂ.ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದುಷಿ ವಸುಧಾ ಶರ್ಮ, ಉಪನ್ಯಾಸಕ ಮಂಜುನಾಥ್, ಕಲಾವಿದ ಗುರುನಂದನ್, ವಿದ್ವಾನ್ ಜನಾರ್ಧನ್, ನಾಟಕ ನಿರ್ದೇಶಕ ನಾರಾಯಣ ಸ್ವಾಮಿ, ಶಿಕ್ಷಕಿ ರತ್ನಾವತಿ, ವಸುಮತಿ ಮಂಜುನಾಥ ಇದ್ದರು. ವಿ.ಉದಯ ಕುಮಾರ್ ಹೆಜ್ಜೆಗೆಜ್ಜೆ ರಚಿಸಿರುವ ಶ್ರೀಮತಿ ಪರಂಧಾಮ ಪ್ರಹಸನ ನಾಟಕ ನಡೆಯಿತು.