ಬದಲಾದ ಜೀವನಶೈಲಿಯಿಂದಾಗಿ ಹೆಚ್ಚುತ್ತಿರುವ ಕಾಯಿಲೆಗಳು

New Balaji New
Published on

ಹುಬ್ಬಳ್ಳಿ : ಜೀವನಶೈಲಿ ಬದಲಾದಂತೆ ಹದಿಹರೆಯ ಯುವಕರಲ್ಲಿ ಕಾಯಿಲೆಗಳು ಸಹ ಹೆಚ್ಚುತ್ತಿವೆ. ವಿದ್ಯಾರ್ಥಿಗಳು ಓದಿನ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಎಂ. ಹೊನಕೇರಿ ಹೇಳಿದರು.

ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಗರದ ಬಾಲಾಜಿ ಆಸ್ಪತ್ರೆ ವತಿಯಿಂದ ಸ್ಟ್ರೋಕ್ ಕುರಿತು ಜನಜಾಗೃತಿ ಮೂಡಿಸಲು ಆಸ್ಪತ್ರೆ ಆವರಣದಿಂದ ಬುಧವಾರ ಹಮ್ಮಿಕೊಂಡಿದ್ದ ವಾಕಥಾನ್​ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳು ಕೇವಲ ವಯಸ್ಕರಿಗೆ ಬರುತ್ತವೆ ಎಂಬ ಮಾತು ಇದೀಗ ದೂರವಾಗಿದೆ. ಆಧುನಿಕ ಜೀವನ ಶೈಲಿ, ವ್ಯಾಯಾಮ ರಹಿತ ಜೀವನ, ಒತ್ತಡ, ಜಂಕ್ ಫುಡ್ ಸೇವನೆ ಮತ್ತಿತರ ದುರಭ್ಯಾಸಗಳಿಂದ ಯುವಕರಲ್ಲೂ ಅನೇಕ ಕಾಯಿಲೆಗಳು ಕಂಡು ಬರುತ್ತಿವೆ ಎಂದರು.

ನೇತೃತ್ವ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಪ್ರತಿ ವರ್ಷ ಜಗತ್ತಿನಾದ್ಯಂತ ಪ್ರತಿ ನಾಲ್ಕು ಜನರ ಪೈಕಿ ಒಬ್ಬರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ, ಅಂಶಗಳ ಪ್ರಕಾರ ಹೃದಯಾಘಾತ ನಂತರ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಾಣಾಂತಿಕ ಕಾಯಿಲೆ ಸ್ಟ್ರೋಕ್ ಆಗಿದೆ ಎಂದರು.

ಐ.ಎಂ.ಎ. ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ. ಬಸವರಾಜ ಸಜ್ಜನ, ಡಾ. ಡಿ.ಕೆ. ಮಹೇಶ, ಸಂದೀಪ ಬೂದಿಹಾಳ, ಎಂ.ಆರ್. ಪಾಟೀಲ,ಎಂ.ಕೆ. ನಾಯ್ಕರ, ಗುರುಪಾದ ಕಮ್ಮಾರ, ಗುರು ಬನ್ನಿಕೊಪ್ಪ, ರಿಕಿ ಖೋಡೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net