

ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಅಂತರ್ಯುದ್ಧ ಮತ್ತು ಸಮುದಾಯಗಳ ಘರ್ಷಣೆಗಳಿಂದ ದುರ್ಬಲತೆ ಹೆಚ್ಚಾಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಬೇಸರಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ 70 ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಯುದ್ದಗಳಿಂದ ಅನೇಕ ಸಮುದಾಯಗಳು ಹಿಂದೆ ಉಳಿಯುತ್ತವೆ. ಇಂತಹ ಸಂಘರ್ಷಗಳಿಂದ ಸಂತ್ರಸ್ತರಾದವರನ್ನು ಮೇಲೆತ್ತಿ, ಅವರ ಬದುಕು ಸುಧಾರಣೆಗೆ ಶ್ರಮಿಸುವುದು ಮಹತ್ವದ ಕೆಲಸ. ಇದು ಮುಖ್ಯವಾದ ಸೇವೆ. ಪ್ರಪಂಚದಲ್ಲಿ ಸಂಘರ್ಷವಿಲ್ಲದ ದೇಶಗಳೇ ಇಲ್ಲ. ಅಧಿಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ದೊಡ್ಡ ಜನರ ಸಂಘರ್ಷಗಳ ಪರಿಣಾಮವಾಗಿ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲತೆ ಸಿಲುಕುತ್ತಾರೆ ಎಂದು ವಿಷಾದಿಸಿದ್ದಾರೆ.
*ಜಾಗತಿಕ ಪುರಸ್ಕಾರ
ಕಾರ್ಯಕ್ರಮದಲ್ಲಿ ಪ್ಯೂರ್ ಸ್ಟೋರೇಜ್ ಕಂಪನಿ ಕಂಪನಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಜೇಯ ಮೊಟಗಾನಹಳ್ಳಿ, ಇಂಜಿನಿಯರಿಂಗ್ ಮ್ಯಾನೇಜರ್ ಪ್ರಮೋದ್ ಅನ್ವೇಕರ್
ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ, ಕೊಲಂಬಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಒಲ್ಗಾ ಇನೆಸ್ ಮೊಂಟೊಯಾ ಅರಿಯಾಸ್ ಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಲಾಯಿತು.
ಮಾತೃದೇಶದ ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಸಾಂಪ್ರದಾಯಿಕ ಉಡುಪು, ಪ್ರವಾಸಿ ತಾಣಗಳು, ಪ್ರಸಿದ್ಧ ಖಾದ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಕೊಲಂಬಿಯಾ ಪ್ರತಿನಿಧಿ ದೇಬಿ ಜೂಲಿಯನ್ ಅಫನಾಡರ್ ಮಾಹಿತಿ ನೀಡಿದರು.