ಕೂಡು ಕುಟುಂಬದಿಂದ ಜೀವನ ಮೌಲ್ಯ ವೃದ್ಧಿ

Increased value of life through extended family
ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಗೆ ಶಿಕ್ಷಕ ಸಂತೋಷ ಬಂಡೆ ಚಾಲನೆ ನೀಡಿದರು. ಬಸವರಾಜ ಸಾರವಾಡ, ಮಂಜುನಾಥ ಗಂಗನಳ್ಳಿ, ಪಿ.ವೈ. ರಜನಿಕರ ಮತ್ತಿತರರಿದ್ದಾರೆ.
Published on

ವಿಜಯಪುರ : ಕುಟುಂಬವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದು ನಮ್ಮ ಬದುಕನ್ನು ನಿರ್ಮಿಸುವ ಅಡಿಪಾಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿ, ಕುಟುಂಬವು ಪ್ರೀತಿ, ಗೌರವ, ನಂಬಿಕೆ, ಭರವಸೆ, ಕಾಳಜಿ ಮತ್ತು ಉತ್ತಮ ನಡವಳಿಕೆಯಂತಹ ಮೌಲ್ಯಗಳನ್ನು ಕಲಿಸಿ, ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ. ಕುಟುಂಬ ಸಮಾಜದ ಅಡಿಪಾಯ. ಅಲ್ಲದೆ, ಪ್ರೀತಿಯಿಂದ ಒಟ್ಟಿಗೆ ಬದುಕಲು ಸದಾ ಪ್ರೇರೇಪಿಸುತ್ತದೆ ಎಂದರು.

ಇಂಡಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಿ.ವೈ. ರಜನಿಕರ ಮಾತನಾಡಿ, ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಅದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂಬುವುದಾಗಿದ್ದು, ಸಾಮಾಜಿಕೀಕರಣ, ಭಾಷಾ ಬೆಳವಣಿಗೆ, ಮಗುವಿನಲ್ಲಿ ಬೆಳೆಸುವ ಭಾವನಾತ್ಮಕ ಕೌಶಲ್ಯಗಳು ಕುಟುಂಬದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಸಿದ್ರಾಮ ಹೊಸಟ್ಟಿ, ಗ್ರಾಮಸ್ಥರಾದ ಸುರೇಶ ಕತ್ನಳ್ಳಿ, ಬಸವರಾಜ ಸಾರವಾಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net