

ಮಡಿಕೇರಿ: ಮುಂಗಾರು ಆರಂಭವಾಗುವುದಕ್ಕೂ ಮೊದಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 40.77 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 82.4 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 12.75 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 21.15 ಮಿ.ಮೀ ಮಳೆಯಾಗಿದೆ.
ಮಡಿಕೇರಿ 51.2, ನಾಪೋಕ್ಲು 37.2, ಸಂಪಾಜೆ 111.2, ಭಾಗಮಂಡಲ 130, ವಿರಾಜಪೇಟೆ 10.8, ಹುದಿಕೇರಿ 2, ಪೊನ್ನಂಪೇಟೆ 7.2, ಅಮ್ಮತ್ತಿ 7, ಬಾಳೆಲೆ 24, ಸೋಮವಾರಪೇಟೆ 31, ಶನಿವಾರಸಂತೆ 19.4, ಶಾಂತಳ್ಳಿ 66.2, ಕೊಡ್ಲಿಪೇಟೆ 20.4, ಕುಶಾಲನಗರ 15.8, ಸುಂಟಿಕೊಪ್ಪ 10.1 ಮಿ.ಮೀ. ಮಳೆಯಾಗಿದೆ.