ಭಟ್ಕಳದಲ್ಲಿ ಹೆಚ್ಚಿದ ದೇಗುಲ ಕಳವು ಪ್ರಕರಣ

Increased number of temple theft cases in Bhatkal
 ಹೆಬಳೆ ಕುಕ್ಕನೀರ್ ವೆಂಕಟಾಪುರ ಮಾರ್ಗದಲ್ಲಿ ಪತ್ತೆಯಾದ ತಾಮ್ರದ ಹಂಡೆ.
Published on

ಭಟ್ಕಳ: ತಾಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕ ಮಹಾಸತಿ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಒಡೆದು ಒಳಗಿದ್ದ ಹಣ ಕದ್ದೊಯ್ದ ಘಟನೆ ನಡೆದಿದೆ.

ಕಳ್ಳರು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ದುಷ್ಕೃತ್ಯ ಎಸಗಿದ್ದು, ಹುಂಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇದರ ಅರ್ಧ ಕಿ.ಮೀ. ದೂರದಲ್ಲಿರುವ ಅರೇಕಲ್ ಜಟಕ ಮಹಾಸತಿ ದೇವಸ್ಥಾನಕ್ಕೂ ಕಳ್ಳರು ನುಗ್ಗಿ ಅಲ್ಲಿ ಸಹ ಹುಂಡಿ ಕದ್ದೊಯ್ದಿದ್ದಾರೆ. ಹಿಂದಿನ ಕಳ್ಳತನದ ತನಿಖೆ ಇನ್ನೂ ಮುಗಿದ ಮುನ್ನವೇ ಮತ್ತೊಂದು ಕೃತ್ಯ ನಡೆದಿರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಪರಿಶೀಲನೆಗೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಹೆಬಳೆ ಕುಕ್ಕನೀರ್ ವೆಂಕಟಾಪುರ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆಯಾದ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹಂಡೆಯ ಮೇಲೆ ಈರಮ್ಮ ಮಾಸ್ತಿ ಮೊಗೇರ ಎಂಬ ಹೆಸರು ಕೆತ್ತಲಾಗಿದ್ದು, ಇದು ದೇವಾಲಯ ಕಳ್ಳತನಕ್ಕೆ ಸಂಬಂಧಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಂಡೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net