ಬಿಸಿಲು-ಮಳೆ ಕಣ್ಣಾಮುಚ್ಚಾಲೆಗೆ ಸೊಳ್ಳೆಗಳ ಸಂತತಿ ಹೆಚ್ಚಳ

dengue
Published on

ಭದ್ರಾವತಿ: ಉಕ್ಕಿನನಗರಿಯಲ್ಲಿ ಸೊಳ್ಳೆಗಳ ಕಾಟ ಅಽಕವಾಗಿದ್ದು ನಗರಸಭೆ ಅಽಕಾರಿಗಳು ಸೊಳ್ಳೆಗಳ ನಾಶಕ್ಕೆ ಔಷಽ ಸಿಂಪಡಣೆ ಮಾಡುವುದನ್ನೇ ಮರೆತಿದ್ದಾರೆ ಎಂದು ಸ್ಥಳೀಯರು ನಗರಸಭೆ ಅಽಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.

ಕಳೆದೆರಡು ತಿಂಗಳು ಸುರಿದ ಮಳೆ, ಏಕಾಏಕಿ ಕಾಣಿಸಿಕೊಳ್ಳುತ್ತಿರುವ ಬಿಸಿಲಿನ ವಾತಾವರಣಕ್ಕೆ ಸೊಳ್ಳೆಗಳ ಸಂತತಿ ಹೆಚ್ಚಾಗಿದೆ. ರಸ್ತೆಯ ಬದಿಗಳಲ್ಲಿ ಸಂಗ್ರಹಗೊಳ್ಳುವ ಹಸಿ ಹಾಗೂ ಒಣಕಸ, ಚರಂಡಿಗಳಲ್ಲಿನ ಮಲೀನ ನೀರು. ಮನೆಯ ಅಕ್ಕಪಕ್ಕ ಖಾಲಿ ಬಿದ್ದಿರುವ ಸೈಟುಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಸೊಳ್ಳೆಗಳ ಸಂತತಿ ಹೆಚ್ಚಾಗಲು ಕಾರಣವಾಗಿದೆ. ವಾರ್ಡ್ ವ್ಯಾಪ್ತಿಗಳಲ್ಲಿ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕ ಆಸ್ಪತ್ರೆಗೆ ತಪಾಸಣೆಗೆಂದು ಬರುವ ರೋಗಿಗಳು ಚೀಟಿ ಪಡೆಯಲು ಸಾಲು ಗಟ್ಟಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ.
ಸೊಳ್ಳೆಗಳ ಹಾವಳಿ ಹೆಚ್ಚಾಗಿರುವುದರಿಂದ ಜನರು ಮನೆಯ ಬಾಗಿಲು, ಕಿಟಕಿಗಳು ದಿನವಿಡೀ ಮುಚ್ಚಿರಬೇಕಾದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಿಯೂ ಮನೆಯ ಫ್ಯಾನ್ 24 ಗಂಟೆ ತಿರುಗುತ್ತಿರಬೇಕಾಗಿದೆ. ಕಳೆದ ನಾಲ್ಕೆÊದು ದಿನಗಳಿಂದ ಸಂಜೆ ವಿದ್ಯುತ್ ಕಡಿತವಾಗುತ್ತಿದ್ದು ಅಂತಹ ಸಮಯದಲ್ಲಿ ಸೊಳ್ಳೆಗಳ ಕಡಿತಕ್ಕೆ ತುತ್ತಾಗಬೇಕಿದೆ. ಸಾಂಕ್ರಾಮಿಕ ಕಾಯಿಲೆಗಳು ಸೇರಿ ಜ್ವರದ ಭೀತಿ ಸಹ ಎದುರಿಸುವಂತಾಗಿದೆ. ನಿಯಂತ್ರಣಕ್ಕಾಗಿ ಬಳಸುವ ಸೊಳ್ಳೆ ಬತ್ತಿಗಳು, ಮ್ಯಾಟ್‌ಗಳು ಉಪಯೋಗಕ್ಕೆ ಬಾರದಂತಾಗಿದೆ.
ನಗರದಲ್ಲಿ ಸೈಟುಗಳನ್ನು ಖರೀದಿಸುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಮನೆ ಕಟ್ಟುವ ಬದಲಾಗಿ ದುಪ್ಪಟ್ಟು ದರಕ್ಕೆ ಮಾರಿಕೊಳ್ಳುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಮಾರಾಟ ಮಾಡುವವರೆಗೂ ನಿವೇಶನ ಖಾಲಿ ಬಿದ್ದು ಗಿಡಗಂಟಿಗಳು ಬೆಳೆದು ಹಾವು, ಚೇಳುಗಳ ವಾಸಸ್ಥಳವಾಗಿದೆ. ಅಲ್ಲದೆ ಸೊಳ್ಳೆಗಳ ಸಂತತಿಗೂ ದಾರಿ ಮಾಡಿಕೊಡುತ್ತಿದೆ. ಖಾಲಿ ಇರುವ ನಿವೇಶನವನ್ನು ನಗರಸಭೆಯಿಂದಲೇ ಸ್ವಚ್ಛತೆ ಮಾಡಿಸಿ ತಗಲುವ ವೆಚ್ಚವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸುವ ಆಶಾದಾಯಕ ಬೆಳವಣೀಗೆಗೆ ನಗರಸಭೆ ಅಽಕಾರಿಗಳು ಚಿಂತನೆ ನಡೆಸಿ ಹಲವು ಸಭೆಗಳಲ್ಲಿ ನಿರ್ಧಾರಕ್ಕೆ ಬಂದರಾದರೂ ಕಾರ್ಯಗತವಾಗಿಲ್ಲ.

ಮಳೆಗಾಲದಲ್ಲಿ ಔಷಧ ಸಿಂಪಡಿಸಿದರೆ ಪ್ರಯೋಜನವಿಲ್ಲ. ಹಾಗಾಗಿ ಸದ್ಯಕ್ಕೆ ಔಷಧ ಸಿಂಪಡಣೆ ಕಾರ್ಯ ಮಾಡಿಲ್ಲ. ಈ ಹಿಂದೆ ಒಂದು ಬಾರಿ ಸಿಂಪಡಣೆ ಮಾಡಲಾಗಿದೆ. ನಗರಸಭೆ ವ್ಯಾಪ್ತಿಗನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವ ಕಾರಣ ಖಾಲಿ ಸೈಟಿನ ಸ್ವಚ್ಛತೆ ನಿರ್ವಹಣೆ ನಗರಸಭೆಯಿಂದ ಕಷ್ಟವಾಗುತ್ತದೆ. ಶೀಘ್ರವೇ ಔಷಧ ಸಿಂಪಡಿಸಲಾಗುವುದು.| ಮನುಕುಮಾರ್ಪೌರಾಯುಕ್ತ

ಔಷಧ ಸಿಂಪಡಣೆ ಮಾಡಲು ಮಳೆ ಅಡ್ಡಿ
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮಳೆಗಾಲದ ಆರಂಭಕ್ಕೂ ಮುನ್ನ ಸೊಳ್ಳೆಗಳ ಸಂತತಿ ನಿರ್ಮೂಲನೆಗೆ ಔಷಧ ಸಿಂಪಡಣೆ ಮಾಡಿಸುತ್ತಿದ್ದ ನಗರಸಭೆ ಅಽಕಾರಿಗಳು ಈ ಬಾರಿ ಒಮ್ಮೆಯೂ ಔಷಧ ಸಿಂಪಡಣೆ ಮಾಡಲು ಮುಂದಾಗಿಲ್ಲ. ಮಳೆಗಾಲದಲ್ಲಿ ಔಷಧ ಸಿಂಪಡಣೆ ಮಾಡಿದರೆ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ಆ ಕಾರ್ಯಕ್ಕೆ ಮಾಡುತ್ತಿಲ್ಲ ಎಂಬುದು ನಗರಸಭೆ ಅಽಕಾರಿಗಳು ಹೇಳುತ್ತಾರೆ. ಆದರೆ ಸೊಳ್ಳೆಗಳ ಕಾಟ ಬಿಸಿಲು-ಮಳೆಯ ನಡುವೆ ಹೆಚ್ಚಾಗಿದ್ದು ಜನ ಮಾತ್ರ ಹೈರಾಣಾಗಿದ್ದಾರೆ. ಇದರ ನಡುವೆ ಆರೋಗ್ಯ ಇಲಾಖೆ ಮಾತ್ರ ಲಾರ್ವಾ ಸಮೀಕ್ಷೆ ನಡೆಸುವುದರಲ್ಲಿ ತಲ್ಲೀನವಾಗಿದೆ.

ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ತಿಂಗಳಿಗೆ ಎರಡು ಬಾರಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಇದುವರೆಗೂ ೮ ಡೆಂಘೆ ಪ್ರಕರಣಗಳು ಪತ್ತೆಯಾಗಿವೆ. ಆದರೆ ಒಂದೇ ಕಡೆ ಹೆಚ್ಚಿನ ಪ್ರಕರಣ ದಾಖಲಾಗಿಲ್ಲ. ಹೆಚ್ಚಿನ ಪ್ರಕರಣಗಳು ಕಂಡು ಬಂದಲ್ಲಿ ಮನೆಯ ಒಳ ಹಾಗೂ ಹೊರಗೆ -Áಗಿಂಗ್ ಮಾಡಲಾಗುವುದು. ಮನೆಯ ಸುತ್ತಾ ಮುತ್ತ ಸ್ವಚ್ಛತೆಯ ನಿರ್ವಹಣೆ ಮಾಡಿದ್ದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.| ಡಾ.ಎಂ.ವಿ.ಅಶೋಕ್ತಾಲೂಕು ಆರೋಗ್ಯಾಽಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net