ಅಲಂಕಾರಿಕ ವಸ್ತುಗಳಿಗೂ ಹೆಚ್ಚಿದ ಬೇಡಿಕೆ

Untitled-3
Published on

ದೇವನಹಳ್ಳಿ : ತಾಲೂಕಿನಾದ್ಯಂತ ವರಮಹಾಲ್ಮ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ. ದೇವನಹಳ್ಳಿಯಲ್ಲಿ ಹೂವು, ಹಣ್ಣಿನ ವ್ಯಾಪಾರ ಭರದಿಂದ ಸಾಗಿದ್ದು, ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಜನಜಂಗುಳಿ ಅಧಿಕವಾಗಿದೆ. ಎಷ್ಟೇ ಬೆಲೆ ಏರಿಕೆಯಾದರೂ ಹೂವು, ಹಣ್ಣು ಸಿಹಿ ತಿನಿಸು ಸೇರಿ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ತೊಡಗಿದ್ದರು. ಸೇಬು ಕೆ.ಜಿಗೆ 150&300 ರೂ., ಮರಸೇಬು 150& 200 ರೂ., ದಾಳಿಂಬೆ 200 ರೂ., ಕಿತ್ತಲೆ 150&300 ರೂ., ಮುಸಂಬಿ 100 ರೂ., ಏಲಕ್ಕಿ ಬಾಳೆ 120&140 ರೂ., ಪಚ್ಚಬಾಳೆ 50 ರೂ., ದ್ರಾ 200&300 ರೂ., ಅನಾನಸ್​ ಒಂದಕ್ಕೆ 150 ರೂ., ಚೇಪೆ 100 ರೂ. ಇದೆ. ಇನ್ನೂ ಮಲ್ಲಿಗೆ ಕೆ.ಜಿಗೆ 2000 ರೂ., ಕನಕಾಂಬರ 3000 ರೂ., ಕಾಕಡ 1000 ರೂ., ರೋಜಾ 300&350ರೂ., ಚಂಡು ಹೂವು 80 ರೂ., ಸೇವಂತಿಗೆ 400 ರೂ., ಸುಗಂಧರಾಜ 400ರೂ., ಕಾಡು ಮಲ್ಲಿಗೆ 500&600 ರೂ., ಕೆಜಿಯಾಗಿದೆ. ಲ್ಮಗೆ ಪ್ರಿಯವಾದ ಕಮಲ ಜೋಡಿಗೆ 80 ರಿಂದ 100 ರೂಪಾಯಿ ಇದೆ. ಆಸ್ಟ್ರೆಲಿಯಾ ಹೂವು 1 ಕಟ್ಟಿಗೆ 150 ರೂ., ರೋಜಾ 150 ರೂ., ಹಾರ ತೋಮಾಲೆ 600 ರಿಂದ 800 ರೂ., ಹೂವಿನ ಫ್ರೇಂ 2000 ರೂಪಾಯಿ ಇದೆ. ಬೆಲೆ ಇನ್ನೂ ಏರಿಕೆ ಆಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಅಧಿಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net