

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಹಗಲು,ರಾತ್ರಿ ಎನ್ನದೆ ದುಡಿದರೂ ಆಟೋ ಚಾಲಕರ ಜೀವನ ನಿರ್ವಹಣೆ ದುಸ್ತರವಾಗಿದೆ. ದಿನದ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟ. ಸರ್ಕಾರದ ಸೌಲಭ್ಯಗಳು ಗಗನ ಕುಸುಮವಾಗಿವೆ. ಇನ್ಸೂರೆನ್ಸ್ ದರ ಹೆಚ್ಚಾಗಿದೆ, ಬಿಡಿ ಭಾಗಗಳ ದರ ದುಪ್ಪಟ್ಟಾಗಿದೆ. ಗ್ಯಾಸ್, ಪೆಟ್ರೊಲ್, ಅಡುಗೆ ಪದಾರ್ಥಗಳು ಸೇರಿದಂತೆ ಎಲ್ಲವೂ ಹೆಚ್ಚಳವಾಗಿವೆ. ಆದರೆ, ಆಟೋ ಬಾಡಿಗೆ ದರ ಮಾತ್ರ ಹೆಚ್ಚಾಗಿಲ್ಲ ಎನ್ನುವುದು ರಾಯಚೂರು ನಗರ ಆಟೋ ಚಾಲಕರ ಅಳಲು.
ಸರ್ಕಾರವು ಆಟೋ ಚಾಲಕರನ್ನು ಅಸಂಘಟಿತ ಕಾರ್ಮಿಕರ ಗುಂಪಿಗೆ ಸೇರಿಸಲಾಗಿದೆ. ಆದರೆ ಕಟ್ಟಡ ಕಾರ್ಮಿಕರಿಗೆ ನೀಡುವ ಸವಲತ್ತುಗಳಾದ ಚಿಕಿತ್ಸಾ ವೆಚ್ಚ, ವಿದ್ಯಾರ್ಥಿ ವೇತನ, ನಿವೇಶನ, ಮದುವೆಗೆ ಆರ್ಥಿಕ ಸಹಾಯ, ಸಾಲ ಸೌಲಭ್ಯ, ಭತ್ಯೆ ಸೇರಿದಂತೆ ಹಲವಾರು ಸವಲತ್ತುಗಳಿಂದ ಆಟೋ ಚಾಲಕರು ವಂಚಿತರಾಗಿದ್ದು,ಈ ಕುರಿತು ಅನೇಕ ಭಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಉಪಯೋಗವಾಗಿಲ್ಲ ಎಂದು ಆಟೋ ಚಾಲಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಇಂಧನ ವೆಚ್ಚ ಕಳೆದು ದಿನದ ಆದಾಯ ೨೦೦ರಿಂದ ೩೦೦ ರೂ. ಮಾತ್ರ ಸಿಗುತ್ತದೆ. ಕಟ್ಟಡ ಕಾರ್ಮಿಕರಿಗಿಂತ ಆಟೋ ಚಾಲಕರ ಸ್ಥಿತಿ ಶೋಚನೀಯವಾಗಿದ್ದು, ಈ ತಾರತಮ್ಯವನ್ನು ಸರಕಾರ ಕೈ ಬಿಡಬೇಕು ಎನ್ನುವುದು ಆಟೋ ಚಾಲಕರ ಒತ್ತಾಯ.
ಆಟೋ ಚಾಲಕರಿಗೆ ಬೇಕಿದೆ ಭದ್ರತೆ
ನಗರದ ೪೮ ಕ್ಕೂ ಅಽಕ ಆಟೋ ನಿಲ್ದಾಣಗಳಲ್ಲಿ ಕುಡಿಯುವ ನೀರು, ನೆರಳು, ಶೌಚಗೃಹ, ಸ್ವಚ್ಛತೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ರಾತ್ರಿಯ ವೇಳೆಯಲ್ಲಿ ವಿದ್ಯುತ್ ವ್ಯವಸ್ಥೆ ಇರುವುದಿಲ್ಲ. ಇದರಿಂದ, ಆಟೋ ನಿಲ್ದಾಣದಲ್ಲಿ ಯಾವುದೇ ಭದ್ರತೆಯಿಲ್ಲದೆ ಜೀವನ ನಡೆಸಬೇಕಾದ ಸ್ಥಿತಿ ಉಂಟಾಗಿದೆ.
ಜನಸAಚಾರ ವಿರಳವಾಗಿದ್ದು, ಬಾಡಿಗೆ ಸಿಗುತ್ತಿಲ್ಲ. ಸರ್ಕಾರ ನಮ್ಮಿಂದ ತೆರಿಗೆ, ಇನ್ಸೂರೆನ್ಸ್, ಆರ್‌ಟಿಒ ಇಲಾಖೆಯವರು ಹಣ ಕಟ್ಟಿಸಿಕೊಳ್ಳುತ್ತಾರೆ. ಸರ್ಕಾರಕ್ಕೆ ಪ್ರತಿ ವರ್ಷ ಆಟೋ ಚಾಲಕರಿಂದ ಲಕ್ಷಾಂತರ ರೂ. ಸೇರುತ್ತದೆ. ಆದರೆ, ಆಟೋ ಚಾಲಕರಿಗೆ ಇಎಸ್‌ಎಐ, ಪಿಎಸ್‌ಐ, ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಯಾವುದೇ ಅನುಕೂಲ ಸಿಗುತ್ತಿಲ್ಲ.
ಹೆಚ್ಚದ ಪೈಪೋಟಿ
ನಗರದಲ್ಲಿ ಸುಮಾರು ೧೫೦೦ಕ್ಕೂ ಅಽಕ ಆಟೋಗಳಿದ್ದು ಅದರಲ್ಲಿ ೧೦೦೦ ಆಟೋಗಳು ಮಾತ್ರ ಪರವಾನಿಗೆ ಪಡೆದಿದ್ದು,ಇನ್ನು ಉಳಿದ ಆಟೋಗಳಿಗೆ ಪರವಾನಿಗೆ ದೊರೆಯುತ್ತಿಲ್ಲ.ಇದರಿಂದ ನಗರದಲ್ಲಿ ಆಟೋ ಚಾಲಕರ ಪೈಪೋಟಿ ಹೆಚ್ಚಾಗಿದ್ದು ಇದರಿಂದ ನಗರಾದ್ಯಂತ ರಸ್ತೆಯ ಮಧ್ಯದಲ್ಲಿ ಆಟೋ ನಿಲ್ಲಿಸಲಾಗುತ್ತಿದ್ದು, ಜನರು ಆಟೋ ಸ್ಟಾ÷್ಯಂಡ್‌ಗೆ ತೆರಳದೆ ದಾರಿಯಲ್ಲಿ ಹತ್ತುತ್ತಿದ್ದರೆ ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಈ ಕುರಿತು ಈ ಹಿಂದಿನ ಎಸ್ಪಿ ನಿಖಿಲ್ ಅವರು ಸಭೆಯನ್ನು ಕರೆದು ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ದಂಡ ವಿಽಸಲಾಗುತ್ತದೆ ಎಂದು ನಗರದಲ್ಲಿ ಆಟೋಗಳಿಗೆ ವಿಶೇಷ ನಂಬರ್‌ಗಳನ್ನು ನೀಡಲಾಗಿದ್ದು, ಕೆಲವು ಪರವಾನಿಗೆ ಇಲ್ಲದೆ ಇರುವ ಆಟೋಗಳು ದಾರಿ ಮಧ್ಯದಲ್ಲಿ ನಿಲ್ಲಿಸಿ ಸಂಚಾರಕ್ಕೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ರಾಯಚೂರು ನಗರದಲ್ಲಿನ ಆಟೋ ಚಾಲಕರ ಸೌಲಭ್ಯ ಹಾಗೂ ಆಟೋ ಸ್ಟಾಂಡ್‌ಗಳಲ್ಲಿ ಮೂಲಭೂತ ಸೌಲಭ್ಯ ನೀಡಲು ಶೀಘ್ರದಲ್ಲಿ ಸಭೆ ಕರೆಯಲಾಗುವುದು ಜತೆಗೆ ರಸ್ತೆ ಮದ್ಯದಲ್ಲಿ ಆಟೋಗಳನ್ನು ನಿಲ್ಲಿಸಿದರೆ ಕ್ರಮ ಕೈಮ ಕೈಗೊಳ್ಳಲಾಗುವುದು.
ಜುಬಿನ್ ಮೊಹಪಾತ್ರ ಆಯುಕ್ತರು ಮಹಾನಗರ ಪಾಲಿಕೆ ರಾಯಚೂರು