ಶಂಕಿತನ ಕುರಿತು ಹೆಚ್ಚಿದ ಆತಂಕ

26kdl1
Published on

ವಿಜಯವಾಣಿ ಸುದ್ದಿಜಾಲ ಕುಂದಗೋಳ

ಬಾಂಗ್ಲಾದೇಶದಿಂದ ಪಟ್ಟಣಕ್ಕೆ ಮಾ. 20ರಂದು ಆಗಮಿಸಿದ್ದ ಹೈದರ್ ಸಾಬ್ ಕಳ್ಳಿಮನಿ ಎಂಬá-ವರ ಬಲಗೈ ಮೇಲೆ ಹೋಂ ಕ್ವಾರಂಟೈನ್ ಛಾಪಾ ಸೀಲ್ ಹಾಕಿ ಕಳಿಸಲಾಗಿದೆ. ಆದರೆ, ಆ ವ್ಯಕ್ತಿ ಮನೆಯಲ್ಲಿರದೇ ಹೊರಗೆ ಓಡಾಡá-ತ್ತಿದ್ದಾನೆ ಎಂದು ಬುಧವಾರ ಸಂಜೆ ವಾಟ್ಸ್​ಆಪ್​ನಲ್ಲಿ ಹರಿ ದಾಡತೊಡಗಿದ್ದು, ಪಟ್ಟಣ ಸೇರಿ ತಾಲೂಕಿನಾದ್ಯಂತ ಜನತೆ ಆತಂಕಕ್ಕೊಗಾಗಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಈತನಿಗೆ ಮನೆಯಲ್ಲಿ ಹದಿನೈದು ದಿನ ಚಿಕಿತ್ಸೆ ಪಡೆಯಬೇಕು. ಮನೆ ಬಿಟ್ಟು ಹೊರಗಡೆ ಹೋಗಬಾರದು ಎಂಬ ಸೂಚನೆ ನೀಡಿದರೂ ಅದನ್ನು ಲೆಕ್ಕಿಸದೆ ಈ ವ್ಯಕ್ತಿ ಮನೆಯಿಂದ ಹೊರಗಡೆ ಬರುವುದು ಹೋಗುವುದು ಕಂಡುಬಂದಿದೆ. ಇದನ್ನು ಪಕ್ಕದ ಮನೆಯವರು ಫೋಟೋ ತೆಗೆದು ವಾಟ್ಸ್​ಆಪ್ ಗ್ರೂಪ್ ಸೇರಿ ಸೋಸಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿದರೆ, ‘ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆಯಿರಿ’ ಎಂದು ಹಾರಿಕೆ ಉತ್ತರ ನೀಡá-ತ್ತಾರೆ. ಒಟ್ಟಾರೆ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸá-ತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net