

ಯಳಂದೂರು: ತಾಲೂಕಿನ ಬನ್ನಿಸಾರಿಗೆ, ಶಿವಕಳ್ಳಿ, ಟಿ.ಹೊಸೂರು ಸುತ್ತಮುತ್ತ ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮದ ಜಮೀನುಗಳ ಬಳಿ ಸಂಜೆಯಾಗುತ್ತಲೇ ನಿತ್ಯ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಶಿವಕಳ್ಳಿ ಗ್ರಾಮದ ಸೋಮಣ್ಣ ಎಂಬುವವರ ಜಮೀನಿನಲ್ಲಿ ಬೋನು ಇರಿಸಿ, ಅದರೊಳಗೆ ನಾಯಿ ಕಟ್ಟಿ ಹಾಕಿದ್ದಾರೆ. ವಿಪರ್ಯಾಸ ಎಂದರೆ ಬೋನು ಸುತ್ತ ಚಿರತೆ ಓಡಾಡಿದ್ದರೂ ಬೋನಿಗೆ ಬಿದ್ದಿಲ್ಲ.
ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲೇ ಈ ಗ್ರಾಮಗಳಿದ್ದು, ಆಗಾಗ ಇಲ್ಲಿ ಆನೆ, ಚಿರತೆ, ಕಾಡೆಮ್ಮೆ, ಕಾಡುಹಂದಿ, ಜಿಂಕೆಗಳ ಹಾವಳಿಯೂ ಇದೆ. ರಾತ್ರಿ ವೇಳೆಯಲ್ಲೇ ಬೆಳೆಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸುವ ಪರಿಸ್ಥಿತಿ ಇದ್ದು, ಜೀವದ ಹಂಗನ್ನು ತೊರೆದು ಜಮೀನಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಅವಘಢ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರಾದ ಮಹಾದೇವಸ್ವಾಮಿ, ಸೋವಣ್ಣ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
.