ಪಠ್ಯಕ್ಕೆ ಪೂರಕವಾದ ಅಂಶಗಳ ಜ್ಞಾನ ಹೆಚ್ಚಿಸಿಕೊಳ್ಳಿ

Increase your knowledge of the elements that complement the text.
ಹಣ್ಣು ಬೆಳೆಗಾರರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಶಿಕ್ಷಕ ಎಂ.ಆರ್.ದೇಶಪಾಂಡೆ ಮಾತನಾಡಿದರು. ಕೆ.ಟಿ.ಪಾಟೀಲ, ಎಸ್.ಆ. ವಾಘ, ವಿ.ಜಿ.ದೇಶಪಾಂಡೆ, ಎಂ.ಜಿ. ಮಂಟೂರ ಮತ್ತಿತರರಿದ್ದಾರೆ.
Published on

ಕಲಾದಗಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಅದಕ್ಕೆ ಪೂರಕವಾದ ಅಂಶಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಭಾಷಾ ಕೌಶಲದ ತಿಳಿವಳಿಕೆ ಬಹಳ ಮುಖ್ಯವಾಗಿದೆ ಎಂದು ಬಾಗಲಕೋಟೆಯ ವಿವೇಕಾನಂದ ಪ್ರೌಢಶಾಲೆ ಸಹಶಿಕ್ಷಕ ಎಂ.ಆರ್.ದೇಶಪಾಂಡೆ ಹೇಳಿದರು.

ಸ್ಥಳೀಯ ಹಣ್ಣು ಬೆಳೆಗಾರರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಕಾಲೇಜು ದಿನಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಸರಿಯಾದ ದಾರಿ ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಉನ್ನತ ಹಂತ ತಲುಪಲು ಸಾಧ್ಯ ಎಂದರು.

ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಣ್ಣು ಬೆಳೆಗಾರರ ಸಂಘದ ಕಾರ್ಯದರ್ಶಿ ಎಸ್.ಆರ್. ವಾಘ, ಕಾರ್ಯದರ್ಶಿ ವಿ.ಜಿ. ದೇಶಪಾಂಡೆ, ನಿರ್ದೇಶಕ ಎಂ.ಜಿ. ಮಂಟೂರ, ಕಾಲೇಜಿನ ಪ್ರಾಚಾರ್ಯ ಎಸ್.ಬಿ. ಬಳವಾಟ, ಮುಖ್ಯಶಿಕ್ಷಕ ಆರ್.ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ, ಜಗದೀಶ ಚವಡಿ ಮತ್ತಿತರರಿದ್ದರು.

ಉಪನ್ಯಾಸಕಿ ಶಾಂತಾ ಪೂಜಾರಿ ಸ್ವಾಗತಿಸಿದರು. ಸುರೇಖಾ ಶೀಲವಂತರ, ಶೈಲಶ್ರೀ ಸಾಲಿಮನಿ ನಿರೂಪಿಸಿದರು. ಉಪನ್ಯಾಸಕ ಸಂತೋಷ ಹೊಸಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net