ದೀಪ ಪೂಜೆಯಿಂದ ಸಂಪತ್ತು ವೃದ್ಧಿ

deepam
Published on

ನರೇಗಲ್ಲ: ಪಟ್ಟಣದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಕಾರ್ಯಕ್ರಮದಡಿ ಮಾತೃ ಮಂಡಳಿ ವತಿಯಿಂದ ದೀಪ ಪೂಜನಂ ಕಾರ್ಯಕ್ರಮ ನಡೆಯಿತು.

ಉತ್ತರ ಪ್ರಾಂತ ಸಂಚಾಲಕ ಸಂಜೀವಕುಮಾರ ಭೋಸಗೇಕರ ಮಾತನಾಡಿ, ದೀಪವು ನಮ್ಮಲ್ಲಿನ ದುರ್ಗುಣಗಳನ್ನು ದೂರ ಮಾಡುತ್ತದೆ. ದೀಪದ ಮುಂದೆ ಎಲ್ಲರೂ ಸಮಾನರು. ದೀಪವನ್ನು ಬೆಳಗಿಸುವುದರಿಂದ ಬರೀ ಕತ್ತಲೆ ಓಡಿ ಹೋಗುವುದಿಲ್ಲ ಬದಲಿಗೆ ನಮ್ಮ ಮನದ ಅಂಧಕಾರವನ್ನೂ ದೂರವಾಗಿಸುವ ಶಕ್ತಿ ದೀಪಕ್ಕಿದೆ. ಆದ್ದರಿಂದಲೇ ಎಲ್ಲರೂ ತಮ್ಮ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪಗಳನ್ನು ಬೆಳಗಿಸುತ್ತಾರೆ. ದೀಪ ಬೆಳಗುವುದರಿಂದ ಸಂಪತ್ತು ಸಿಗುತ್ತದೆ. ದೀಪದ ಪೂಜೆಯಿಂದ ಆ ಸಂಪತ್ತು ವೃದ್ಧಿಯಾಗುತ್ತದೆ. ಅದಕ್ಕಾಗಿಯೆ ದೀಪವನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಸಾಮೂಹಿಕವಾಗಿ ದೀಪದ ಪೂಜೆ ಮಾಡುವುದರಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು. ಸಂಪತ್ತು ಯಾವಾಗಲೂ ಸನ್ಮಾರ್ಗದಿಂದ ಬರಬೇಕು ಮತ್ತು ಅದು ಯಾವಾಗಲೂ ಸದ್ವಿನಿಯೋಗವಾಗುವಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಹೇಳಿದರು.

ಮಾತೃ ಮಂಡಳಿಯ ಜಿಲ್ಲಾ ಸಂಯೋಜಕಿ ನಾಗವೇಣಿ ಕಟ್ಟಿಮನಿ ಮಾತನಾಡಿ. ಡಿ. 3ರಂದು ಮಾತೃ ಮಂಡಳಿಯಿಂದ ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಸುಧಾ ಮೂರ್ತಿಯವರನ್ನು ಆಹ್ವಾನಿಸಲಾಗಿದೆ ಎಂದರು.

ನಟರಾಜ, ಅಶ್ವಿನಿ ಜಗತಾಪ, ಸುನಂದಾ, ಗಂಗಮ್ಮ ದೇವರಮನಿ, ಅರ್ಚನಾ ಕುಲಕರ್ಣಿ, ಗಂಗಾ, ಸುಜಾತಾ ಸಂಗನಾಳಮಠ, ಕಾವ್ಯಾ, ಸೀಮಾ ಕೊಂಡಿ, ಗೀತಾ ಪತ್ತಾರ, ಚನ್ನಬಸಪ್ಪ ಕುಷ್ಟಗಿ, ಸುರೇಶ ಅಂಕದ, ಜಗದೀಶ ಸಂಕನಗೌಡ್ರ, ಶಿವನಗೌಡ ಪಾಟೀಲ, ಈಶ್ವರ ಬೆಟಗೇರಿ, ಆನಂದ ಕುಲಕರ್ಣಿ, ಶಶಿಧರ ಓದಿಸುಮಠ, ನರೇಶ ಜೋಳದ, ಚಂದ್ರು ವಂಕಲಕುಂಟಿ, ಈರಣ್ಣ ಚವಡಿ, ಚಂದ್ರು ಹೊನವಾಡ, ವೆಂಕಣ್ಣ ವೈದ್ಯ, ಶಿವಾನಂದ ಇಟಗಿ ಇತರರಿದ್ದರು. ರಘುನಾಥ ಕೊಂಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net