ಭತ್ತದ ಬೆಂಬಲ ಬೆಲೆ 3500 ರೂ.ಗೆ ಹೆಚ್ಚಿಸಿ

18BANNU1
ಭತ್ತದ ಬೆಳೆಗೆ 3500ರೂಗಳ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅವರಿಗೆ ಬನ್ನೂರು ನಾರಾಯಣ್ ಮನವಿ ಸಲ್ಲಿಸಿದರು.
Published on

ಬನ್ನೂರು: ಭತ್ತ ಬೆಳೆಗಾರರಿಗೆ ಈಗ ನೀಡುತ್ತಿರುವ ಬೆಂಬಲ ಬೆಲೆ ಭತ್ತ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಇರುವುದರಿಂದ ಬೆಂಬಲ ಬೆಲೆಯನ್ನು 3500 ರೂ.ಗಳಿಗೆ ಹೆಚ್ಚಿಸಿ ರೈತರ ಸಮಸ್ಯೆಯನ್ನು ಪರಿಹರಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅವರಿಗೆ ಮನವಿ ಸಲ್ಲಿಸಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬು ಬೆಳೆಗರರಿಗೆ ಕಟಾವು ಮತ್ತು ಸಾಗಣೆ ವೆಚ್ಚವನ್ನು ಹೊರತುಪಡಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಅಂದರೆ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕೆಂದು ಸರ್ಕಾರ ಆದೇಶಿಸಿ ಕಬ್ಬು ಬೆಳೆಗಾರರನ್ನು ಸಾಲದ ಸಂಕಷ್ಟದಿಂದ ಪಾರು ಮಾಡಬೇಕಿದೆ. ಇದರಿಂದ ಮುಂದಿನ ಯುವ ಪೀಳಿಗೆ ಕಬ್ಬು ಕೃಷಿ ಮಾಡಲು ಆಕರ್ಷಿತರಾಗುತ್ತಾರೆ. ಇಲ್ಲವಾದಲ್ಲಿ ಕೃಷಿ ಉತ್ಪನ್ನ ವೆಚ್ಚಕ್ಕಿಂತ ಕಡಿಮೆ ದರ ಮಾಡಿದರೆ ರೈತರು ಕೃಷಿಯಿಂದ ವಿಮುಖರಾಗುತ್ತಾರೆ ಎಂದರು.

ಈಗಿರುವ ಖರೀದಿ ಕೇಂದ್ರಗಳು ಕೇವಲ ನೆಪಮಾತ್ರಕ್ಕೆ ಮಾತ್ರ ಇದ್ದು, ಧಾನ್ಯಗಳನ್ನು ಸಕಾಲದಲ್ಲಿ ಖರೀದಿಸುತ್ತಿಲ್ಲ. ಇದರಿಂದ ಖರೀದಿ ಕೇಂದ್ರ ಇದ್ದರೂ ರೈತರಿಗೆ ಉಪಯೋಗವಾಗುತ್ತಿಲ್ಲ. ಆದ್ದರಿಂದ ರೈತರು ಕಟಾವು ಮಾಡಿದ ಸ್ಥಳದಲ್ಲೇ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಹಾಗಾಗಿ ಭತ್ತ ಬೆಳೆದ ರೈತರು ಸಂಕಷ್ಟದಲ್ಲಿದ್ದು ಸರ್ಕಾರ ಸಕಾಲದಲ್ಲಿ ಭತ್ತ ಖರೀದಿಸಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net