ದೇವದಾಸಿ ಮಹಿಳೆಯರ ಪಿಂಚಣಿ ಹೆಚ್ಚಿಸಿ

01-02-Shiva-3
ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಯಚೂರಿನ ಕೇಂದ್ರ ಅಂಚೆ ಕಚೇರಿ ಮುಂದೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಪತ್ರ ಚಳುವಳಿ ನಡೆಸಲಾಯಿತು. ಸಂಘದ ಅಧ್ಯಕ್ಷೆ ಎಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವೀರೇಶ, ಪದಾಕಾರಿಗಳಾದ ಮಹಾದೇವಿ, ಜಮಲಮ್ಮ, ವರಲಕ್ಷ್ಮಿ, ತಾಯಮ್ಮ ಇದ್ದರು.
Published on

ರಾಯಚೂರು: ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಗುರುವಾರ ಪತ್ರ ಚಳುವಳಿ ನಡೆಸಲಾಯಿತು.
ಸರ್ಕಾರಕ್ಕೆ ಸಾಮೂಹಿಕವಾಗಿ ಪತ್ರ ರವಾನಿಸಿ, ಪಿಂಚಣಿ ಹೆಚ್ಚಳಕ್ಕಾಗಿ ಹಲವು ಬಾರಿ ಹೋರಾಟ ನಡೆಸಲಾಗಿದ್ದರೂ ಪಿಂಚಣಿ ಹೆಚ್ಚಳಕ್ಕೆ ಸರ್ಕಾರಗಳು ಮುಂದಾಗಿಲ್ಲ. 2016-2017ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಯೋಜನೆಗೆ ಅನುದಾನ ನೀಡಲಾಗಿತ್ತು. ಅದರಂತೆ 2016ನೇ ಸಾಲಿನಲ್ಲಿ ಮಾಸಿಕ ಸಹಾಯಕಧನವನ್ನು ಒಂದು ಸಾವಿರ ರೂ.ದಿಂದ 1,500 ರೂ.ಗೆ ಹೆಚ್ಚಿಸಲಾಗಿತ್ತು.
ಅಲ್ಲಿಂದ ಇಲ್ಲಿಯವರೆಗೆ ಕಳೆದ 8 ವರ್ಷಗಳಿಂದ ಹಿಂದಿನ ಬಿಜೆಪಿ ಸರ್ಕಾರವಾಗಲಿ ಈಗಿನ ಕಾಂಗ್ರೆಸ್ ಸರ್ಕಾರವಾಗಲಿ ಪಿಂಚಣಿಯನ್ನು ಹೆಚ್ಚಿಸಿಲ್ಲ. ರಾಜ್ಯ ಸರ್ಕಾರ ಬಜೆಟ್ ಮಂಡನೆಗೆ ಮುಂದಾಗಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಪಿಂಚಣಿಯನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಎಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವೀರೇಶ, ಪದಾಕಾರಿಗಳಾದ ಮಹಾದೇವಿ, ಜಮಲಮ್ಮ, ವರಲಕ್ಷ್ಮಿ, ತಾಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net