ಗ್ರಾಮಸ್ಥರಲ್ಲಿ ಓದುವ ಅಭಿರುಚಿ ಹೆಚ್ಚಿಸಿ

19 KMP[ 02
ಕಂಪ್ಲಿಯಲ್ಲಿ ಗ್ರಾಪಂ ಮಟ್ಟದ ಅರಿವು ಕೇಂದ್ರಗಳ ಸಲಹಾ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕುರುವಳ್ಳಿ ತಿಮ್ಮಯ್ಯ ಮಾತನಾಡಿದರು. ಪ್ರಮುಖರಾದ ಸೋಮೇಶ್ವರಿ, ಈರಮ್ಮ ಪೂಜಾರ್, ಟಿ.ಪದ್ಮಾ, ಪಿ.ಶಿಲ್ಪಾರಾಣಿ, ಹನುಮಂತಪ್ಪ, ಎಚ್.ಪಿ.ಸೋಮಶೇಖರ ಇತರರಿದ್ದರು.
Published on

ಕಂಪ್ಲಿ: ಗ್ರಂಥಾಲಯ ಬಡವರ ವಿಶ್ವವಿದ್ಯಾಲಯಗಳಾಗಿದ್ದು, ಗ್ರಾಮೀಣ ಜನತೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ನಂ.10 ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ ಹೇಳಿದರು.

ಪಟ್ಟಣದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಪಂನಿಂದ ಹಮ್ಮಿಕೊಂಡಿದ್ದ ನಂ.10 ಮುದ್ದಾಪುರ, ರಾಮಸಾಗರ ಮತ್ತು ದೇವಲಾಪುರ ಗ್ರಾಪಂಗಳ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ಹೈಬ್ರಿಡ್ ಮುಖಾಮುಖಿ ತರಬೇತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಕುರುವಳ್ಳಿ ತಿಮ್ಮಯ್ಯ ಮತ್ತು ಟಿ.ಪದ್ಮಾ ತರಬೇತಿ ನೀಡಿ, ಗ್ರಂಥಾಲಯಗಳಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ, ಕತೆ, ಕಾದಂಬರಿ ಮೊದಲಾದ ಪುಸ್ತಕಗಳನ್ನು ಓದುವಂತೆ ಗ್ರಾಮಸ್ಥರಲ್ಲಿ ಪ್ರೇರೇಪಿಸಲು ಸಲಹಾ ಸಮಿತಿ ಸದಸ್ಯರು ಮುಂದಾಗಬೇಕು ಎಂದರು.

ಗ್ರಂಥಾಲಯದಲ್ಲಿ ಅಂತರ್ಜಾಲ ಬಳಕೆ, ಪುಸ್ತಕ ಸಂಪನ್ಮೂಲ, ವಿಶೇಷ ಚೇತನರ ಬೀಕನ್ ಗ್ರಂಥಾಲಯ ಬಳಕೆ, ಗ್ರಂಥಾಲಯಗಳ ಅಭಿವೃದ್ಧಿಗಳಲ್ಲಿ ಸಲಹಾ ಸಮಿತಿ ಸದಸ್ಯರ ಪಾತ್ರ ಕುರಿತು ಮಾಹಿತಿ ನೀಡಲಾಯಿತು. ದೇವಲಾಪುರ ಗ್ರಾಪಂ ಅಧ್ಯಕ್ಷೆ ಈರಮ್ಮ ಪೂಜಾರ್ ತರಬೇತಿಗೆ ಚಾಲನೆ ನೀಡಿದರು. ಪಿಡಿಒಗಳಾದ ಪಿ.ಶಿಲ್ಪಾರಾಣಿ, ಹನುಮಂತಪ್ಪ, ಮುಖ್ಯಶಿಕ್ಷಕರಾದ ಚನ್ನಬಸಮ್ಮ ಶೆಟ್ರು, ರಮೇಶ ಸುಗ್ಗೇನಹಳ್ಳಿ, ರೈತ ಸಂಘದ ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಯುವಕ ಸಂಘದ ಅಧ್ಯಕ್ಷ ರಮೆಶ ಪೂಜಾರ್, ಗ್ರಂಥಾಲಯ ಮೇಲ್ವಿಚಾರಕ ಸಿ.ಡಿ.ಗಿರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net