

ಅಳವಂಡಿ: ಬೆಳೆ ಸಮೀಕ್ಷೆದಾರರ ಗೌರವ ಧನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೊಪ್ಪಳ ತಾಲೂಕಿನ ಬೆಳೆ ಸಮೀಕ್ಷೆದಾರರ ತಂಡ ತಹಸೀಲ್ದಾರ್ ವಿಠ್ಠಲ ಚೌಗಲೆಗೆ ಶುಕ್ರವಾರ ಮನವಿ ಸಲ್ಲಿಸಿತು.
ಏಳು ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡುತ್ತಿದ್ದು, ಪ್ರತಿ ಜಮೀನಿನ ಸರ್ವೇ ನಂಬರ್ ಸಮೀಕ್ಷೆಗೆ ನೀಡುತ್ತಿರುವ 10 ರೂ.ಯಿಂದ 50 ರೂ.ಗೆ ಹೆಚ್ಚಿಸಬೇಕು. ಮಾಸಿಕ ವೇತನ, ಕೆಲಸ ಕಾಯಂಗೊಳಿಸುವಿಕೆ, ಸಾಮಾಜಿಕ ಹಾಗೂ ಆರೋಗ್ಯ ಭದ್ರತೆ, ಗುರುತಿನ ಚೀಟಿ ನೀಡುವುದು, ವೈದ್ಯಕೀಯ ವೆಚ್ಚ ಬರಿಸುವುದು, ಹಳೆಯ ಆ್ಯಪ್ ಮುಂದುವರಿಸುವುದು, ಬೆಳೆ ಸಮೀಕ್ಷೆಗೆ ಮೊಬೈಲ್ ನೀಡುವಂತೆ ಒತ್ತಾಯಿಸಿದರು.
ಬೆಳೆ ಸಮೀಕ್ಷೆದಾರರಾದ ಶರಣಪ್ಪ ಹಕಾರಿ, ಕುಬೇರರಡ್ಡಿ, ಅನಿಷ್‌ಸಾಬ್, ಹನುಮಂತ, ಬೆನಕಪ್ಪ, ಬೀರಪ್ಪ, ವೆಂಕಟೇಶ, ಗವಿಸಿದ್ದಪ್ಪ, ಏಳುಕೋಟೇಶ, ಬಸವನಗೌಡ ಮಂಜುನಾಥ ಇದ್ದರು.