ಹೊಸ ತಳಿಗಳ ಬೀಜ ಸಂಶೋಧನೆ ಹೆಚ್ಚಲಿ

19 mdg 2
Published on

ಮುಂಡರಗಿ: ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ದೊರೆತ ಹಲವು ವರ್ಷ ಬಹುತೇಕ ಕೃಷಿ ಸಂಬಂಧಿತ ಬೀಜಕ್ಕಾಗಿ ವಿದೇಶಗಳ ಮೇಲೆ ಅವಲಂಬನೆ ಆಗಿದ್ದೀವಿ. ಆದರೆ, ಇತ್ತೀಚೆಗೆ ನಮ್ಮ ದೇಶದಲ್ಲೂ ಕೃಷಿ ಬಿತ್ತನೆಗೆ ಬೇಕಾದ ಬೀಜಗಳ ಸಂಶೋಧನೆ ನಡೆಯುತ್ತಿದೆ. ರೈತರಿಗೆ ಅಗತ್ಯವಾದ ಹೊಸ ತಳಿಗಳ ಬೀಜಗಳ ಸಂಶೋಧನೆ ಮಾಡುವಲ್ಲಿ ಕೃಷಿ ವಿಶ್ವವಿದ್ಯಾಲಯ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಕೃಷಿ ಇಲಾಖೆಯ 2024-25ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಬೆಳೆ ಯೋಜನೆಯಡಿ ಸೂರ್ಯಕಾಂತಿ ಬೀಜದ ಕಿರು ಚೀಲಗಳ ವಿತರಣೆ, ಬೀಜೋಪಚಾರ ಅಂದೋಲನ, ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಸೂರ್ಯಕಾಂತಿ ಬೀಜ ಹೊಸ ತಳಿ ಕೆಬಿಎಸ್ ಎಚ್ 78ನ್ನು ಅರ್ಹ ರೈತರಿಗೆ ಉಚಿತವಾಗಿ ಕೃಷಿ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಎಲ್ಲ ಅವಧಿಯಲ್ಲಿ ಉತ್ತಮ ಇಳುವರಿ ಬರುವ ಬೀಜವಾಗಿದೆ. ರೈತರಿಗೆ ಕೆಲವೊಮ್ಮೆ ನಿಸರ್ಗ ಕೈಕೊಡುತ್ತದೆ. ಕೆಲವೊಮ್ಮೆ ಬೆಳೆದ ಬೆಳೆಗೆ ಯೋಗ್ಯ ಬೆಲೆ ಇರುವುದಿಲ್ಲ. ಸರ್ಕಾರ ರೈತರ ಅಭಿವೃದ್ಧಿಗೆ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದು, ಸದುಪಯೋಗ ಪಡೆಯಬೇಕು ಎಂದರು.

ಗದಗ ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್., ಮಾತನಾಡಿ, ರೈತರು ತಮ್ಮ ಜಮೀನುಗಳನ್ನು ಮಣ್ಣು ಮತ್ತು ಇತರ ಅಂಶಗಳ ಆಧಾರದ ಮೇಲೆ ವಿವಿಧ ಬೀಜಗಳನ್ನು ಬಿತ್ತನೆ ಮಾಡಬೇಕು. ಕೆಜಿಎನ್‌ಎಚ್ 78 ಸೂರ್ಯಕಾಂತಿ ಹೊಸ ತಳಿ ಬೀಜವಾಗಿದ್ದು, ಅಲ್ಪ ಅವಧಿಯಲ್ಲಿ ಉತ್ತಮ ಇಳುವರಿ ನೀಡು ತ್ತದೆ. ಸಾಂಕೇತಿಕವಾಗಿ ಅರ್ಹ ರೈತರಿಗೆ ಉಚಿತ ವಾಗಿ ನೀಡಲಾಗುತ್ತಿದೆ. ಬೀಜವನ್ನು ರೈತರು ಕಡ್ಡಾಯವಾಗಿ ಬಿತ್ತನೆ ಮಾಡಬೇಕು ಎಂದರು.

ಕೃಷಿ ವಿಜ್ಞಾನಿ ಎಸ್.ಎಲ್. ಪಾಟೀಲ ಹಾಗೂ ನಿಂಗಪ್ಪ ಬಿ.ಜಿ. ಉಪನ್ಯಾಸ ನೀಡಿದರು. ತಾ.ಪಂ. ಇಒ ವಿಶ್ವನಾಥ ಹೊಸಮನಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಾಳ, ಗ್ರಾ.ಪಂ. ಅಧ್ಯಕ್ಷೆ ಹುಲಿಗೆಮ್ಮ ಪಾಟೀಲ, ಉಪಾಧ್ಯಕ್ಷೆ ನಿರ್ಮಲಾ ಹರಿಜನ, ಹೇಮಣ್ಣ ಪೂಜಾರ, ರಾಮನಗೌಡ ಪಾಟೀಲ, ಯಲ್ಲಪ್ಪ ಮಾಳೆಕೊಪ್ಪ, ಸೂರ್ಯಕಾಂತ ಕವಲೂರ, ಮಹೇಶ ಗಡಗಿ, ರಾಜಕುಮಾರ ಪೂಜಾರ, ರವಿ ದೊಡ್ಡಮನಿ, ಮುತ್ತಣ್ಣ ಕೊಂತಿಕಲ್, ಮಲ್ಲಿಕಾರ್ಜುನ ಪ್ಯಾಟಿ, ಎಸ್.ವಿ. ರಾಮೇನಹಳ್ಳಿ, ಹನಮಂತಪ್ಪ ಕೆ., ಶಿವಮೂರ್ತಿ ನಾಯಕ, ಗೌರಿಶಂಕರ ಸಜ್ಜನರ, ಡಿ.ಡಿ. ಸೊರಟೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net