ನಾಡುಗುಂಡಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳ

18 gkp 01.
Published on

ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವ ಪರಿಣಾಮ ನಾಡುಗುಂಡಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ವಿ.ಬಾಡಗ, ಕಂಡಂಗಾಲ ಮೂಲಕ ಹೊಳೆ ಹರಿದು ಬರುತ್ತಿರುವುದರಿಂದ ಜುಳು, ಜುಳು ಶಬ್ದ ಕೇಳುವಂತಾಗಿದೆ. ಜತೆಗೆ ಮಣ್ಣು ಮಿಶ್ರಿತ ನೀರು ಹೆಚ್ಚಾಗಿ ಹರಿಯುತ್ತಿದೆ. ಮುಂಗಾರಿನಲ್ಲಿ ಮೊದಲ ಬಾರಿಗೆ ನೀರು ಹರಿಯುತ್ತಿರುವುದರಿಂದ ಸ್ಥಳೀಯರು ಪುಳಕಗೊಂಡಿದ್ದಾರೆ.

ಈ ಭಾಗದ ಬಹುತೇಕ ಗ್ರಾಮಗಳಲ್ಲಿ ರಾತ್ರಿಯಿಡೀ ರಭಸದಿಂದ ಮಳೆ ಸುರಿದಿದೆ. ಗುರುವಾರ ಒಳಗೊಂಡಂತೆ 24 ಗಂಟೆಯಲ್ಲಿ ಭಾಗಮಂಡಲಕ್ಕೆ 4 ಇಂಚು ಮಳೆ ಬಿದ್ದಿದೆ. ಇದು ಜಿಲ್ಲೆಯಲ್ಲಿ ದಾಖಲಾಗಿರುವ ಹೆಚ್ಚು ಮಳೆ ಪ್ರಮಾಣವಾಗಿದೆ ಎಂದು ಗೋಣಿಕೊಪ್ಪ ಕೆವಿಕೆ ಕೃಷಿ ಹವಾಮಾನ ಘಟಕ ಮಾಹಿತಿ ನೀಡಿದೆ.

ಗೋಣಿಕೊಪ್ಪ ಭಾಗಕ್ಕೆ 2.08 ಇಂಚು, ಮಾಯಮುಡಿ 1.50, ಧನುಗಾಲ 1.63, ಕೆ. ಬಾಡಗಕ್ಕೆ 0.99, ಮಂದೋಡ 1.55, ಬಾಳುಗೋಡು 2.40, ಕೈಕೇರಿ 1.9ಒ, ದೇವನೂರು 0.60 ಇಂಚು ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net