ಹೋಮದಿಂದ ದೈವಿಕ ಶಕ್ತಿ ವೃದ್ಧಿ

nrp darmioka
ಶೆಟ್ಟಿಕೊಪ್ಪ ಸಮೀಪದ ಅರಿಶಿಣಗೆರೆ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮಂಡಲ ಪೂಜೋತ್ಸವ ಜರುಗಿತು.
Published on

ಎನ್.ಆರ್.ಪುರ: ದೇವಸ್ಥಾನಗಳಲ್ಲಿ ಕಲಾಹೋಮ ಮಾಡುವುದರಿಂದ ದೈವಿಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ ಎಂದು ಪುರೋಹಿತ ಜಗದೀಶ್ ಭಟ್ ಹೇಳಿದರು.

ಅರಿಶಿಣಗೆರೆ ಶ್ರೀ ರೇವಣಸಿದ್ದೇಶ್ವರ ದೇವಾಲಯ, ನಾಗದೇವರು ಮತ್ತು ಪಂಜುರ್ಲಿ ದೈವಗಳ ವಿಗ್ರಹ ಪ್ರತಿಷ್ಠಾಪಿಸಿ 48 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಮಂಡಲ ಪೂಜೋತ್ಸವದಲ್ಲಿ ಮಾತನಾಡಿ, ದೇವರು ಮನುಷ್ಯನಿಂದ ಬಯಸುವುದು ಶ್ರದ್ಧೆ, ಭಕ್ತಿ, ನಿಷ್ಕಲ್ಮಶ ಮನಸ್ಸಿನ ಆರಾಧನೆ ಮಾತ್ರ. ದೇವರು, ದೈವದ ಮೇಲೆ ನಂಬಿಕೆ ಇಟ್ಟವರು ಅಭಿವೃದ್ಧಿ ಆಗುತ್ತಾರೆ ಎಂದರು.
ಮಂಡಲ ಪೂಜೋತ್ಸವ ಅಂಗವಾಗಿ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಧಾನ ಬ್ರಹ್ಮಕಲಶ ಸ್ಥಾಪನೆ, ಕಲಾಸಾನ್ನಿಧ್ಯ ಹೋಮ, ಮಹಾ ಪೂರ್ಣಾಹುತಿ, ವಿಶೇಷ ಅಭಿಷೇಕ, ಸಂಜೆ ಪುಷ್ಪಾಲಂಕಾರದೊಂದಿಗೆ ಮಹಾಮಂಗಳಾರತಿ ಜರುಗಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುಧಾಕರ್, ಗೌರವಾಧ್ಯಕ್ಷ ಎ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎ.ಡಿ.ಉಮೇಶ್, ಸದಸ್ಯರಾದ ಎನ್.ಕೆ.ಕೀರ್ತನ್, ಎನ್.ಕೆ.ಕಿರಣ್, ಎ.ಎಲ್.ಮಹೇಂದ್ರ, ಎನ್.ಎಂ.ಕಾಂತರಾಜ್, ವೆಂಕಟೇಶ್, ಬಾಲರಾಜ್, ಲಕ್ಷ್ಮಣ ಗೌಡ, ಬಿ.ಎಲ್.ಪ್ರಶಾಂತ್, ಕಣಬೂರು ದೇವರಾಜ್, ಎಂ.ಮಹೇಶ್, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net