ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚಿಸಿ

Increase moral values ​​in children
ವಿಜಯಪುರದ ವೀರಶೈವ ಮಹಾಸಭಾ ಭವನದಲ್ಲಿ ಕಂಚ್ಯಾಣಿ ಶರಣಪ್ಪನವರ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ. ಆನಂದ ಪಾಂಡುರಂಗಿ, ಜಂಬುನಾಥ ಕಂಚ್ಯಾಣಿ, ವಿ.ಸಿ. ನಾಗಠಾಣ ಮತ್ತಿತರರಿದ್ದಾರೆ.
Published on

ವಿಜಯಪುರ : ಮಕ್ಕಳಿಗೆ ಮೊಬೈಲ್​ ಬದಲಿಗೆ ಪುಸ್ತಕಗಳನ್ನು ಕೊಟ್ಟು ನೈತಿಕ ಮೌಲ್ಯ ಹೆಚ್ಚಿಸಬೇಕು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ವೀರಶೈವ ಮಹಾಸಭಾ ಭವನದಲ್ಲಿ ಕಂಚ್ಯಾಣಿ ಶರಣಪ್ಪನವರ ಪುಣ್ಯ ಸ್ಮರಣೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಸಮಾರಂಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ವತಿಯಿಂದ ನೀಡುವ ಜನ ಕಲ್ಯಾಣ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮನಸ್ಸು ಅಗೋಚರವಾಗಿದ್ದು ಸೂಕ್ಷ$್ಮ ಹಾಗೂ ಸಂಕೀರ್ಣವಾದ ರಚನೆ ಹೊಂದಿದೆ. ಸ್ವಸ್ಥ ಮನದಲ್ಲಿ ಸ್ವಸ್ಥ ಮನಸ್ಸಿರಬೇಕು. ಒಮ್ಮೆ ಮನಸ್ಸು ಆಘಾತಕ್ಕೊಳಗಾದರೆ ಅದನ್ನು ಸರಿದಾರಿಗೆ ತರುವುದು ಕಠಿಣ. ಇತ್ತೀಚೆಗೆ ಹಿರಿಯರಂತೆ ಮಕ್ಕಳೂ ಕೂಡ ಮೊಬೈಲ್​ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು, ಸದಾ ಮೊಬೈಲ್​ ನೋಡುವುದರಿಂದ ಕಣ್ಣು ಮತ್ತು ಮನಸ್ಸುಗಳ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದರು.

ನಿವೃತ್ತ ಉಪ ಪ್ರಾಚಾರ್ಯ ಎಸ್​.ಎಸ್​. ಝಳಕಿ ಜನ ಕಲ್ಯಾಣ ಪ್ರಶಸ್ತಿ ಸ್ವೀಕರಿಸಿ, ಶರಣಪ್ಪನವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಸುಶಿತರನ್ನಾಗಿ ಮಾಡಿದ್ದರಿಂದ ಅವರು ಸಮಾಜದಲ್ಲಿ ಗೌರವ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಜ್ಞಾನಯೋಗಾಶ್ರಮ ಜ್ಞಾನಾನಂದ ಸ್ವಾಮೀಜಿ ಅಲ್ಲಮ ಪ್ರಭುದೇವರ ಅನುಭಾವ ಕುರಿತು ಉಪನ್ಯಾಸ ನೀಡಿದರು.

ಪರಿಷತ್ತಿನ ಗೌರವಾಧ್ಯಕ್ಷ ಎಸ್​.ವೈ. ಗದಗ, ಬಸಮ್ಮ ಕಂಚ್ಯಾಣಿ ಉಪಸ್ಥಿತರಿದ್ದರು. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್​.ಎಸ್​. ಕೋರಿ ಪ್ರಾರ್ಥಿಸಿದರು. ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿದರು. ಅಮರೇಶ ಸಾಲಕ್ಕಿ ನಿರೂಪಿಸಿದರು. ಜಂಬುನಾಥ ಕಂಚ್ಯಾಣಿ ವಂದಿಸಿದರು.

ಎಸ್​.ಜಿ. ನಾಡಗೌಡರ ಬಿ.ಟಿ. ಈಶ್ವರಗೊಂಡ, ಮ.ಗು. ಯಾದವಾಡ, ಡಾ. ಶಂಭು ಮೇರವಾಡೆ, ಡಾ. ಉಷಾದೇವಿ ಹಿರೇಮಠ, ಕಮಲಾ ಮುರಾಳ, ಪ್ರಭಾವತಿ ದೇಸಾಯಿ, ದಾಾಯಣಿ ಬಿರಾದಾರ, ಶಾರದಾ ಐಹೊಳ್ಳಿ, ಸಿದ್ದಲಿಂಗಪ್ಪ ನಂದಿ, ರಾಚಣ್ಣ ಕೊಳ್ಳಿ, ವಿ.ಎ. ಪಾಟೀಲ. ಬಿ.ಎಸ್​. ಪಾಟೀಲ, ಕೆ.ಎಫ್​. ಅಂಕಲಗಿ ಡಾ. ಅನುಪಮಾ ಪಾಂಡುರಂಗಿ, ನೀಲಮ್ಮ ಝಳಕಿ, ಡಾ. ರೇಖಾ ಪಾಟೀಲ, ಆರ್​.ಆರ್​. ಹಂಚಿನಾಳ, ಮಹೇಶ ಬಾಗಲಕೋಟ, ಸಿದ್ದಲಿಂಗ ಹದಿಮೂರ, ಎಸ್​.ಕೆ. ಚಿಕ್ಕರಡ್ಡಿ, ಕಾಶೀನಾಥ ಅಣೆಪ್ಪನವರ, ಎಂ.ಎಂ. ಅಂಗಡಿ, ಎಂ.ಎಸ್​. ಝಳಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net