

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್ಡಿಎಂ ಇನ್ಸ್ಟಿಟ್ಯೂಟ್ ಆ್ ನಸಿರ್ಂಗ್ ಸೈನ್ಸ್ ಮತ್ತು ಎಸ್ಡಿಎಂ ಆಸ್ಪತ್ರೆಯ ನಸಿರ್ಂಗ್ ಸೇವಾ ವಿಭಾಗದ ವತಿಯಿಂದ ಶುಶ್ರೂಷಕಿಯರ ಸಪ್ತಾಹ ಉತ್ಕರ್ಷ 2024 ಅನ್ನು ಮೇ 13ರಿಂದ 20ರವರೆಗೆ ಆಚರಿಸಲಾಯಿತು. ಈ ಅವಧಿಯಲ್ಲಿ ಶುಶ್ರೂಷಕಿಯರಿಗೆ ಮತ್ತು ನಸಿರ್ಂಗ್ ವಿದ್ಯಾಥಿರ್ಗಳಿಗೆ ಕ್ರೀಡೆ, ಸಾಂಸತಿಕ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ರಸಪ್ರಶ್ನೆ ಏರ್ಪಡಿಸಲಾಗಿತ್ತು.
ಸೋಮವಾರ ಏರ್ಪಡಿಸಿದ್ದ ಶುಶ್ರೂಷಕಿಯರ ಸಪ್ತಾಹ ಸಮಾರಂಭವನ್ನು ಎಸ್ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಸಪ್ತಾಹ ಉದ್ಘಾಟಿಸಿದರು. ಎಸ್ಡಿಎಂ ವಿಶ್ವ ವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಅವರು ನಸಿರ್ಂಗ್ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥಿರ್ಗಳಿಗೆ ಮತ್ತು ನಸಿರ್ಂಗ್ನಲ್ಲಿ ಉತ್ತಮ ಸೇವೆ ನೀಡಿದ ಶುಶ್ರೂಷಕಿಯರಿಗೆ ಸ್ಮರಣಿಕೆ ಮತ್ತು ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಿದರು.
ಆಸ್ಪತ್ರೆ ವೈದ್ಯಕಿಯ ಅಧೀಕ ಡಾ. ಕಿರಣ ಹೆಗ್ಡೆ ಮಾತನಾಡಿ, ಶುಶ್ರೂಷಕರ ಸ್ಪರ್ಶವು ರೋಗಿಗಳನ್ನು ವೇಗ ಮತ್ತು ಉತ್ತಮವಾಗಿ ಗುಣಪಡಿಸುತ್ತದೆ. ಅವರು ಕಾಲಕ್ಕೆ ಅನುಗುಣವಾಗಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಶುಶ್ರೂಷಕಿಯವರು ಸಣ್ಣ ಕೆಲಸಗಳನ್ನು ಉತ್ತಮವಾಗಿ ಮಾಡುವ ಮೂಲಕ ಶ್ರೇಷ್ಠರಾಗುತ್ತಾರೆ. ಅವರಿಗೆ ಪ್ರಪಂಚದಾದ್ಯಂತ ಸಾಕಷ್ಟು ಬೇಡಿಕೆಯಿದೆ. ಹೀಗಾಗಿ ವೃತ್ತಿ ಪ್ರಗತಿ ಮತ್ತು ಉತಷ್ಟತೆಯು ಮುಖ್ಯವಾಗಿದೆ ಎಂದರು.
ಹಿರಿಯ ಪ್ರಾಧ್ಯಾಪಕಿ ಡಾ. ಗಂಗಾಬಾಯಿ ಕುಲಕಣಿರ್, ಡಾ. ನಾಗೇಶ ಅಜ್ಜವಾಡಿಮಠ, ಇತರರು ಇದ್ದರು. ಉಪ ಪ್ರಾಂಶುಪಾಲ ಡಾ. ಪ್ರಸನ್ನ ದೇಶಪಾಂಡೆ ಸ್ವಾಗತಿಸಿದರು. ನಾನ್ಸಿ ಮೇರಿ ನಿರೂಪಿಸಿದರು. ಮಂಜುಳಾ ಕೆ.ಬಿ. ವಂದಿಸಿದರು. ನಂತರ ಶುಶ್ರೂಷಕಾ ಸಿಬ್ಬಂದಿ ಮತ್ತು ವಿದ್ಯಾಥಿರ್ಗಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು.