ಹೊಸ ತಂತ್ರಜ್ಞಾನದ ಜ್ಞಾನ ವೃದ್ಧಿಸಿಕೊಳ್ಳಿ

10 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹೊಸ ತಂತ್ರಜ್ಞಾನ ಕುರಿತು ಪ್ರಾಧ್ಯಾಪಕರು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಜಯಶ್ರೀ ಎಸ್​. ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗ, ಪಾವಟೆ ಇನ್​ಸ್ಟಿಟ್ಯೂಟ್​ ಆಫ್ ಮೆಥಮ್ಯಾಟಿಕ್ಸ್​ ಹಾಗೂ ಬೆಂಗಳೂರಿನ ಕೋರೇಲ್​ ಟೆಕ್ನಾಲಜೀಸ್​ ಸಹಯೋಗದಲ್ಲಿ ಏರ್ಪಡಿಸಿದ್ದ ಗಣಿತ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರ ಮತ್ತು ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅರಿವೇ ಗುರು ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತ ವಿಜ್ಞಾನಿ ಪ್ರೊ. ಎಂ.ಎನ್​.ಬುಜುರ್ಕೆ ಮಾತನಾಡಿ, ನನ್ನ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿರುವುದು ಸಂತಸದ ಸಂಗತಿ. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್​ ಕೋರ್ಸ್​ಗಳನ್ನು ಪರಿಚಯಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ತಾನಾಗಿ ಒಲಿದು ಬರುತ್ತದೆ ಎಂದರು.

ಪ್ರೊ. ಎ.ಎ. ಮೂಲಿಮನಿ ಮಾತನಾಡಿದರು. ಕರ್ನಾಟಕ ವಿಶ್ವ ವಿದ್ಯಾಲಯ ನೀಡುವ ಅರಿವೇ ಗುರು ಪ್ರಶಸ್ತಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತ ವಿಜ್ಞಾನಿ ಪ್ರೊ.ಎಂ.ಎನ್​.ಬುಜುರ್ಕೆ ಅವರಿಗೆ ಪ್ರದಾನ ಮಾಡಲಾಯಿತು.

ಪ್ರೊ.ಎಸ್​.ಸಿ.ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಎ.ಚೆನ್ನಪ್ಪ, ಹಾವೇರಿ ವಿವಿ ಕುಲಪತಿ ಪ್ರೊ. ಜಂಗಮಶೆಟ್ಟಿ, ಪ್ರಸಾರಂಗ ನಿರ್ದೇಶಕ ಎ.ಎಂ. ಕಡಕೋಳ, ಪ್ರೊ. ಪಿ. ಜಿ. ಪಾಟೀಲ, ಎಚ್​.ಎಸ್​.ರಾಮನೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net