ಪತ್ರಿಕೆಗಳ ಓದಿನಿಂದ ಜ್ಞಾನ ವೃದ್ಧಿ

Increase knowledge by reading newspapers
ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸರ್ಕಾರಿ ಅಕ್ಕನಾಗಮ್ಮ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪಟ್ಟಣದ ಪಿಕೆಪಿಎಸ್ ಬ್ಯಾಂಕ್‌ನಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ವಿತರಣಾ ಸಮಾರಂಭದಲ್ಲಿ ಬಿಇಒ ವಸಂತ ರಾಠೋಡ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಮಲ್ಲೇಶಿ ಕಡಕೊಳ ಹಾಗೂ ನಿರ್ದೇಶಕರು, ಶಿಕ್ಷಣ ಇಲಾಖೆಯವರು ವಿದ್ಯಾರ್ಥಿ ಮಿತ್ರ ಸಂಚಿಕೆ ಬಿಡುಗಡೆಗೊಳಿಸಿದರು.
Published on

ಬಸವನಬಾಗೇವಾಡಿ: ಮಕ್ಕಳ ಜ್ಞಾನ ವೃದ್ಧಿಗಾಗಿ ದಾನಿಗಳು ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ದಿನಪತ್ರಿಕೆ ನೀಡುತ್ತಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ಮಂಗಳವಾರ ಪಟ್ಟಣದ ಬಸವೇಶ್ವರ ದೇವಸ್ಥಾನದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಅಕ್ಕನಾಗಮ್ಮ ಬಾಲಕಿಯರ ಪ್ರೌಢ ಶಾಲೆಗೆ ಪಟ್ಟಣದ ಪಿಕೆಪಿಎಸ್ ಬ್ಯಾಂಕ್‌ನಿಂದ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ಪತ್ರಿಕೆ ನೀಡಿದ ಸಂಘದ ಆಡಳಿತ ಮಂಡಳಿ ನಿರ್ದೇಶಕರಿಗೆ ಸನ್ಮಾನ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ನಿತ್ಯವು ಪತ್ರಿಕೆಯಲ್ಲಿ ಬರುವ ಪ್ರಶ್ನೆ ಪತ್ರಿಕೆಯನ್ನು ಸಂಗ್ರಹಿಸುವುದರ ಜತೆಗೆ ಪತ್ರಿಕೆಯಲ್ಲಿ ಬರುವ ದೇಶ, ವಿದೇಶದ ವಿದ್ಯಮಾನಗಳ ಬಗ್ಗೆ ತಿಳಿಯಬೇಕು.

ಇದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ. ಅದರ ಸದುಪಯೋಗ ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದು ಹೇಳಿದರು.

ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಸಂಪಾದಿಸುವ ಹಣದಲ್ಲಿ ಅಲ್ಪವಾದರೂ ಸಮಾಜದ ಒಳಿತಿಗಾಗಿ ಮೀಸಲಿಟ್ಟಾಗ ಮಾತ್ರ ನಮ್ಮ ಶ್ರಮಕ್ಕೆ ಒಂದು ಅರ್ಥಬರುತ್ತದೆ.

ಇಂದು ನಾವು ನಮ್ಮ ಸಂಘದಿಂದ ನೀಡುತ್ತಿರುವ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯ ಹಿಂದೆ ಸಾವಿರಾರು ಅನ್ನದಾತರ ಶ್ರಮವಿದೆ. ಅನ್ನದಾತರ ಶ್ರಮದಲ್ಲಿ ಅಲ್ಪ ಹಣವನ್ನು ಕಾದಿಟ್ಟು ಸಮಾಜದ ಒಳಿತಿಗಾಗಿ ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಅವಟಿ, ಪಿಕೆಪಿಎಸ್ ಬ್ಯಾಂಕ್‌ನ ಉಪಾಧ್ಯಕ್ಷ ಮಲ್ಲೇಶಿ ಕಡಕೊಳ, ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ನಿಂಗಪ್ಪ ಕುಳಗೇರಿ, ಶ್ರೀಶೈಲ ಪರಮಗೊಂಡ, ಸುರೇಶ ನಾಯಕ, ಮಣ್ಣೂರ ಗ್ರಾಪಂ ಸದಸ್ಯ ಹೈದರ್ ಚಪ್ಪರಬಂದ್, ಪ್ರವೀಣ ಚಿಕ್ಕೊಂಡ, ಶಿಕ್ಷಕ ಪಿ.ಎಚ್. ಡವಳಗಿ, ವಿಜಯವಾಣಿ ವರದಿಗಾರ ಪ್ರಕಾಶ ಬೆಣ್ಣೂರ ಇತರರಿದ್ದರು.

ಶ್ರೀರಕ್ಷಾ ಬಿರಾದಾರ, ವೈಷ್ಣವಿ ಮೊಟೇಕಾರ, ಸಾಕ್ಷಿ ಅರಸನಾಳ ವಿಜಯವಾಣಿಯ ವಿದ್ಯಾರ್ಥಿ, ಉದ್ಯೋಗ ಮಿತ್ರ ಪತ್ರಿಕೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಉಪಯೋಗವನ್ನು ವಿವರಿಸಿದರು.

ಶಿಕ್ಷಕ ಅಶೋಕ ಹಂಚಲಿ ಸ್ವಾಗತಿಸಿದರು. ಶಿವಕುಮಾರ ಹುಲಸೂರ ನಿರೂಪಿಸಿದರು. ವಿದ್ಯಾ ಮನಗೂಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net