

ಸಿರಿಗೇರಿ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಶಾರದಾ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಮುಖ್ಯಶಿಕ್ಷಕ ಗೋವಿಂದರಾಜು ಮಾತನಾಡಿ, ಮಕ್ಕಳು ತಮ್ಮದೇ ಆದ ಪ್ರತಿಭೆ ಹೊಂದಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆಚರಿಸಿದರೆ ಮಕ್ಕಳು ನಮ್ಮ ಕಡೆಗೆ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಕ್ಕಳು ಮುಂದೆ ಬರುತ್ತಿದ್ದಾರೆ. ಇದಕ್ಕೆ ಶಿಕ್ಷಕರ ಪಾತ್ರ ಕೂಡ ಬಹುದೊಡ್ಡದಾಗಿದೆ. ನಮ್ಮ ಶಾಲೆಯಿಂದ ಹಲವು ವಿದ್ಯಾರ್ಥಿಗಳು ಮುರಾರ್ಜಿ, ಆದರ್ಶ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದರು.
ಮುಖ್ಯ ಶಿಕ್ಷಕ ಬಿ.ಆರ್.ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಪ್ರಗತಿಯಲ್ಲಿ ಇದ್ದು, ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಎಚ್.ದುರ್ಗಪ್ಪ, ಪ್ರಮುಖರಾದ ಯೋಗೇಶ್, ಎನ್.ಶಿವಮ್ಮ, ಯಂಕಪ್ಪ, ಕರಿಲಿಂಗಪ್ಪ, ಶಿಕ್ಷಕರಾದ ಜಿ.ಕೆ. ಗುರುಸ್ವಾಮಿ, ಚೈತ್ರಾ, ಆರ್ೀ, ಪಾರ್ವತಿ, ಮಂಗಳಾ, ದುರ್ಗಪ್ಪ ಇತರರಿದ್ದರು.