ಸೂಪಾ ಡ್ಯಾಮ್ ಒಳಹರಿವಿನಲ್ಲಿ ಹೆಚ್ಚಳ

SUPA
Published on

ದಾಂಡೇಲಿ: ಗಣೇಶಗುಡಿಯ ಸೂಪಾ ಡ್ಯಾಮ್‌ನ ಜಲಾನಯನ ಪ್ರದೇಶದಲ್ಲಿ ಕಳೆದ 10-12 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಡ್ಯಾಮ್‌ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಭಾನುವಾರ ಸೂಪಾ ಡ್ಯಾಮ್‌ಗೆ 51435.644 ಕ್ಯೂಸೆಕ್ ಒಳ ಹರಿವು ಬಂದಿದೆ. 564 ಮೀ ಎತ್ತರದ ಡ್ಯಾಮ್‌ನಲ್ಲಿ 536.15 ಮೀ ಎತ್ತರ ನೀರು ತುಂಬಿದೆ. ಕಳೆದ ವರ್ಷ ಜುಲೈ 23 ರಂದು ಡ್ಯಾಮ್‌ನ ನೀರಿನ ಮಟ್ಟ 541.48 ಮೀ.ವರೆಗೆ ಇತ್ತು. ಸದ್ಯ ಡ್ಯಾಮ್‌ನ ಮುಖ್ಯ ದ್ವಾರಗಳಿಂದ ನೀರನ್ನು ಹೊರ ಬಿಡಲಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net