ವಾಣಿಜ್ಯ ಮಳಿಗೆಗಳಿಂದ ಆದಾಯ ಹೆಚ್ಚಳ

Untitled-1
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ವಿಎಸ್​ಎಸ್​ಎನ್​ ಸಂದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸಂದ ಅಧ್ಯಕ್ಷ ನಾರಾಯಣಸ್ವಾಮಿ ಉದ್ಘಾಟಿಸಿದರು. ಹಿರಿಯ ಮುಖಂಡ ಕೃಷ್ಣಪ್ಪ, ಸದಸ್ಯ ಅಂಬರೀಶ್​, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆಂಪೇಗೌಡ, ಸಿಬ್ಬಂದಿ ಸುನೀತಾ, ಸುರೇಶ, ಸುಭಾಕರ್​, ಅಂಜಿನಪ್ಪ ಇತರರು ಇದ್ದರು.
Published on

ದೊಡ್ಡಬಳ್ಳಾಪುರ : ಸಂದ ನಿರ್ದೇಶಕರ ಸಹಕಾರದೊಂದಿಗೆ ರೈತರ ಹಿತಕ್ಕಾಗಿ ವಿನೂತನ ಕಾರ್ಯಕ್ರಮ ಹಾಗೂ ಸಂದ ಅಭಿವೃದ್ಧಿಗಾಗಿ ಸಹಕಾರ ಸಂದ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಶ್ರೀ ಪ್ರಾರಂಭಿಸಲಾಗುವುದು ಎಂದು ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಬಾಶೆಟ್ಟಿಹಳ್ಳಿಯ ವಿಎಸ್​ಎಸ್​ಎನ್​ ಸಂದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎರಡು ಬಾರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಕಟ್ಟಡ ಕಾಮಗಾರಿ ಯಾವುದೇ ರೀತಿಯ ಪ್ರಗತಿ ಕಾಣಲಿಲ್ಲ. ಆದರೆ ಈ ಬಾರಿ ಕಟ್ಟಡ ನಿರ್ಮಾಣ ಮಾಡಲು ಸಕಲ ಸಿದ್ಧತೆ ನಡೆದಿದ್ದು, ನೂತನ ಕಚೇರಿ ಅಷ್ಟೇ ಅಲ್ಲದೇ ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ಸಂದ ಆದಾಯವು ಹೆಚ್ಚಾಗಲಿದೆ ಎಂದರು.ಸ್ಥಳಿಯ ಮುಖಂಡ ಪ್ರೇಮ್​ಕುಮಾರ್​ ಮಾತನಾಡಿ, ಈ ಹಿಂದೆ ಸಂದ ಚುನಾವಣೆಗೆ ಲಕ್ಷ ಲಕ್ಷ ಹಣ ವೆಚ್ಚ ಮಾಡಲಾಗಿದೆ. ಈ ಕುರಿತು ನೂತನ ಅಧ್ಯಕ್ಷರು ತನಿಖೆ ಮಾಡಿ ಸದಸ್ಯರಿಗೆ ವೆಚ್ಚದ ಸಮಪರ್ಕ ಮಾಹಿತಿ ನೀಡಬೇಕು ಎಂದರು.

ರಸಗೊಬ್ಬರ ಪೂರೈಸಿ : ಸಂದಿಂದ ರಸಗೊಬ್ಬರ ವಿತರಣೆ ಮಾಡುವ ಮೂಲಕ ಸ್ಥಳಿಯ ರೈತರಿಗೆ ಅನುಕೂಲ ಕಲ್ಪಿಸಬೇಕು. ಈ ಹಿಂದೆ ಹಲವು ಷೇರುದಾರರ ಹೆಸರು ನಮೂದಿಸದೆ ಕಳೆದ ಚುನಾವಣೆ ವೇಳೆ ಕರಪತ್ರಗಳನ್ನು ಸದಸ್ಯರಿಗೆ ತಲುಪಿಸಲಾಗಿತ್ತು. ಮುಂದೆ ಆ ರೀತಿಯಾಗದಂತೆ ಕ್ರಮಗೊಳ್ಳುಬೇಕು ಎಂದು ರೈತರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net