

ಹೊನ್ನಾಳಿ: ತಾಲೂಕಿನಲ್ಲಿ ಮಂಗಳವಾರವೂ ಜಿಟಿ ಜಿಟಿ ಮಳೆ ಮುಂದುವರಿಯಿತು. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಂಡಿದೆ.
ತಾಲೂಕಿನಾದ್ಯಂತ ಯಾವುದಾದರೂ ಶಾಲೆ ಶಿಥಿಲಾವಸ್ಥೆಯಲ್ಲಿದ್ದರೆ ಮಾತ್ರ ಆ ಶಾಲೆಗೆ ರಜಾ ಕೊಡಲು ಶಾಲೆಯ ಮುಖ್ಯಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಭೇಟಿ ಪರಿಶೀಲನೆ: ತಹಸೀಲ್ದಾರ್ ತಿರುಪತಿ ಪಾಟೀಲ್ ಅವರು ಹೊನ್ನಾಳಿ ಪ್ರವಾಸಿ ಮಂದಿರದ ಬಳಿ ಇರುವ ನದಿ ನೀರಿನ ಮಾಪನ ಪರಿಶೀಲಿಸಿ, ಕಸಬಾ ರಾಜಸ್ವ ನಿರೀಕ್ಷಕ ಗುರುಪ್ರಸಾದ್ ಅವರಿಂದ ಮಾಹಿತಿ ಪಡೆದರು.ನಂತರ ಬಾಲ್‌ರಾಜ್ ಘಾಟ್‌ಗೆ ಹೋಗಿ ಅಲ್ಲಿ ಕಾಳಜಿ ಕೇಂದ್ರ ಪರಿಶೀಲಿಸಿದರು.
ತುಂಗದಿಂದ ಹೊರಹರಿವು: ತುಂಗ ನದಿಯ ಒಳ ಹರಿವು ಹೆಚ್ಚಾಗಿರುವುದರಿಂದ ಮಂಗಳವಾರ ಬೆಳಗ್ಗೆ 21 ಗೇಟ್‌ಗಳ ಮುಖಾಂತರ 61 ಸಾವಿರ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿ ಮೂಲಕ ಹೊರ ಬಿಟ್ಟಿರುವುದರಿಂದ ರಾತ್ರಿ ವೇಳೆಗೆ ನದಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದೆ.