ಹೈನುಗಾರಿಕೆಯಿಂದ ಆದಾಯ ವೃದ್ಧಿ

pnh 2
Published on

ಪಂಚನಹಳ್ಳಿ: ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಹೈನುಗಾರಿಕೆ ಬಹಳ ಪ್ರಮುಖ ಪಾತ್ರವಹಿಸಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಹೇಳಿದರು.

ಕುಂಕನಾಡು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಳೆ ಕೊರತೆಯಿಂದ ಮುಂಗಾರು ಮತ್ತು ಹಿಂಗಾರು ಬೆಳೆಗಳ ಆದಾಯ ಕಡಿಮೆಯಾಗುತ್ತಿದ್ದು, ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಹೈನುಗಾರಿಕೆ ರೈತರ ಆದಾಯಕ್ಕೆ ಪುನಶ್ಚೇತನ ನೀಡುತ್ತಿದೆ. ರೈತರು ಉತ್ತಮ ಗುಣಮಟ್ಟದ ಹಾಲು ಪೂರೈಸುವ ಜತೆಗೆ ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ಚಿಕ್ಕಮಂಗಳೂರು ತಂಡದ ಮುಖ್ಯಸ್ಥರಾದ ರನ್ನಕುಮಾರ್ ಮಾತನಾಡಿ, ರೈತರು ಇಂದು ಉತ್ತಮ ಜೀವನ ನಿರ್ವಹಿಸುತ್ತಿದ್ದಾರೆ ಎಂದರೆ ಅದಕ್ಕೆ ಹೈನುಗಾರಿಕೆ ಮೂಲ ಕಾರಣ. ರಾಸುಗಳ ನಿರ್ವಹಣೆಯಲ್ಲಿ ರೈತರು ಸದಾ ಜಾಗರೂಕತೆಯಾಗಿದ್ದು, ಪ್ರತಿದಿನ ಉತ್ತಮ ಮೇವು, ನೀರು ಮತ್ತು ನಂದಿನಿ ಉತ್ಪನ್ನದ ಪಶು ಆಹಾರವನ್ನು ರಾಸುಗಳಿಗೆ ನೀಡಬೇಕು ಎಂದು ತಿಳಿಸಿದರು.

ಎ.ಎನ್. ಚಂದನ್ ವಿಸ್ತರಣಾಧಿಕಾರಿಗಳಾದ ಭರತ್ ಕುಮಾರ್, ಅಕ್ಕ ನಾಗಮ್ಮ, ಸಂಘದ ಅಧ್ಯಕ್ಷ ಕೆ.ಎಂ.ದೇವರಾಜಪ್ಪ, ಉಪಾಧ್ಯಕ್ಷ ಕೆ.ಯೋಗೀಶ್ ಕಾರ್ಯದರ್ಶಿ, ಡಿ. ಬಸವರಾಜಪ್ಪ, ನಿರ್ದೇಶಕರಾದ ರತ್ನಮ್ಮ, ದೀಪ, ಮಧು, ಬಸವರಾಜಯ್ಯ, ಪ್ರಭಾಕರ್, ರಾಜಪ್ಪ, ಮಲ್ಲೇಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net