

ಮಡಿಕೇರಿ:
ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಜನ ವಸತಿ ಪ್ರದೇಶಗಳಿಗೆ ನುಗ್ಗಿಬರುವ ಆನೆಗಳಿಂದ ಮಾನವ ಜೀವ ಹಾನಿ, ಆಸ್ತಿ-ಪಾಸ್ತಿ, ಸಾಕುಪ್ರಾಣಿಗಳ ನಷ್ಟ ಪ್ರತಿನಿತ್ಯ ವರದಿ ಆಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ನಿಗದಿತ ಪರಿಹಾರವೂ ಸಿಗುತ್ತದೆ. ಮತ್ತೊಂದು ಕಡೆ ಜನವಸತಿ ಪ್ರದೇಶಗಳಿಗೆ ಬರುವ ಆನೆಗಳ ಸಾವಿನ ಪ್ರಮಾಣವೂ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲೇ ೫ ಆನೆಗಳು ವಿದ್ಯುತ್ ಸ್ಪರ್ಶ, ಕೆರೆಯಲ್ಲಿ ಮುಳುಗಿ ಮತ್ತಿತರ ಕಾರಣಗಳಿಂದ ಅಸಹಜವಾಗಿ ಸಾವನ್ನಪ್ಪಿವೆ. ಆನೆ-ಮಾನವ ಸಂಘರ್ಷ ತಪ್ಪಿಸುವ ಮೂಲಕ ಎರಡೂ ಕಡೆಯಲ್ಲಿ ಸಮತೋಲನ ಸಾಧಿಸಲು ಶಾಶ್ವತ ಪರಿಹಾರೋಪಾಯಗಳೇನು? ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಡಾನೆಗಳು ಆಹಾರಕ್ಕಾಗಿ ಜನವಸತಿ ಸ್ಥಳಗಳಿಗೆ ಬರುತ್ತಿವೆ. ಕೃಷಿ ಫಸಲು ಹಾನಿಗೆ ಸೂಕ್ತ ಪರಿಹಾರ ಸಿಗಬೇಕು. ಕಾಡಾನೆಗಳ ಹಾವಳಿ ನಿಯಂತ್ರಣಕ್ಕಾಗಿ ನಡೆಯುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಸೋಲಾರ್ ಪೆನ್ಸ್, ರೈಲ್ವೆ ಬ್ಯಾರಿಕೇಡ್‌ಗಳು ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು. ಸರ್ಕಾರ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಕೊಂಡಾಗ ಜೀವಹಾನಿ ಕಡಿಮೆಯಾಗಲಿದೆ.
ಮಚ್ಚಂಡ ಅಶೋಕ್, ಕಾಫಿ ಬೆಳೆಗಾರ, ಯಡವಾರೆ ಗ್ರಾಮ
ಕಾಡಾನೆ ಮಾನವ ಸಂಘ?ರ್ದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಫಸಲು ನ?್ಟವಾಗುತ್ತಿದೆ. ಕಾಡಿನಲ್ಲೇ ಕಾಡಾನೆಗಳಿಗೆ ಆಹಾರ ಸಿಗುವಂತೆ ಆಗಬೇಕು. ಈ ಬಗ್ಗೆ ಸಂಶೋಧನೆ ಗಳು ನಡೆಯಬೇಕು. ಕಾಡಂಚಿನ ಗ್ರಾಮದವರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಸೂಕ್ತ ಭದ್ರತಾ ವ್ಯವಸ್ಥೆಗಳು ಆಗಬೇಕು.
ಅಶ್ವಿನಿ ಕೃ?್ಣಕಾಂತ್, ಕಾಫಿ ಬೆಳೆಗಾರರು, ಸಿಂಗನಳ್ಳಿ ಗ್ರಾಮ
ಕಾಡಿನಲ್ಲಿ ಆನೆಗಳಿಗೆ ಸರಿಯಾಗಿ ಮೇವು ಸಿಗದ ಕಾರಣ ರೈತರ ತೋಟ-ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಆಹಾರ ಅರಸುತ್ತ ತೋಟ-ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಆರಣ್ಯ ಇಲಾಖೆ, ಸರ್ಕಾರ ಸೂಕ್ತ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಿ. ಇ?್ಟೆಲ್ಲ ಸಮಸ್ಯೆಗಳಿಗೆ ಅರಣ್ಯ ಇಲಾಖೆಯೇ ಕಾರಣ.
ಮೂಕೊಂಡ ಸುಬ್ರಮಣಿ, ಗುಹ್ಯ ಗ್ರಾಮ
ದಕ್ಷಿಣ ಕೊಡಗಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜನನಿಬಿಡ ಪ್ರದೇಶದಲ್ಲಿಯೇ ಬೀಡು ಬಿಟ್ಟಿದೆ. ಇದರಿಂದ ಜನರು, ಕಾರ್ಮಿಕರು ಭಯದಿಂದ ತೋಟದತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅದರ ಜತೆಯಲ್ಲಿಯೇ ಕಾಡಾನೆಗಳು ನಾಡಿನಲ್ಲಿ ಸಾವನ್ನಪ್ಪುವ ಸಂಖ್ಯೆ ಹೆಚ್ಚಿದೆ. ಸರ್ಕಾರ ಕೂಡಲೇ ಕಾಡಾನೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯ ಆಗಬೇಕಿದೆ. ಆಗ ಮಾತ್ರ ಇಂತಹ ಅಸಹಜ ಸಾವಿಗೆ ಪರಿಹಾರ ಸಿಗಲಿದೆ
ಅಕ್ಷಯ್, ಸಮಾಜ ಸೇವಕ, ಗೋಣಿಕೊಪ್ಪ
ವನ್ಯಜೀವಿ ಮತ್ತು ಮಾನವ ಸಂಘ?ರ್ ಹೊಸ ವಿ?ಯ ಏನಲ್ಲ. ಹಲವಾರು ವ?ರ್ಗಳಿಂದ ಈ ಸಂಘ?ರ್ ನಡೆಯುತ್ತಲೇ ಇದೆ. ಆನೆಗಳಿಗೆ ಮೀಸಲು ಅರಣ್ಯ ನಿಗದಿಪಡಿಸುವುದು, ಅಲ್ಲಿ ಸಾಕ?್ಟು ಆಹಾರ ಪೂರೈಕೆ ಮತ್ತು ನೀರಿನ ಪೂರೈಕೆಯತ್ತ ಗಮನಹರಿಸಿ ಜವಾಬ್ದಾರಿಯನ್ನು ನಿಬಾಯಿಸಬೇಕಾದಂತಹ ಅಗತ್ಯ ಇಂದಿದೆ. ತನ್ನ ಬದುಕಿನ?್ಟೇ ಅವುಗಳ ಬದುಕಿನ ಬಗ್ಗೆಯೂ ಚಿಂತಿಸಬೇಕಿದೆ.
ಡಿ.ಸುಜಲಾ ದೇವಿ, ಪಾಂಶುಪಾಲರು, ಸುಪ್ರಜ ಗುರುಕುಲ, ಶನಿವಾರಸಂತೆ
೬. ಆನೆ-ಮಾನವ ಸಂಘರ್ಷಕ್ಕೆ ಸೂಕ್ತ ಪರಿಹಾರ ಕಲ್ಪಿಸುವ ಅಗತ್ಯವಿದೆ. ಮೀಸಲು ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುವ ಮೂಲಕ ಆನೆಗಳನ್ನು ಸಂರಕ್ಷಿಸಬಹುದು. ಇದರಿಂದ ಮನುಕುಲ ಸಂರಕ್ಷಣೆ ಹಾಗೂ ಆನೆಗಳು ಸಹ ಸುರಕ್ಷಿತವಾಗಿರಲು ಅನುಕೂಲವಾಗುತ್ತದೆ.
ಪುನೀತ್ ತಾಳೂರ್, ಯುವ ಮುಖಂಡ, ಶನಿವಾರಸಂತೆ
ಕೊಡಗಿನಲ್ಲಿ ಆನೆ- ಮಾನವ ಸಂಘ?ರ್ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಪಟ್ಟಣದಲ್ಲಿ ವನಮಹೋತ್ಸವ ಮಾಡುವ ಬದಲು ಸರ್ಕಾರ ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಬಿದಿರು, ಹುಲ್ಲು, ಬಾಳೆಗಳನ್ನು ಬೆಳಸುವುದು ಹಾಗೂ ಆನೆಗಳ ಮಾರಣ ಹೋಮ ತಡೆಯಲು ಜನವಸತಿ ಪ್ರದೇಶಗಳಿಗೆ ಆನೆಗಳು ಶಾಶ್ವತವಾಗಿ ಬರದ ಹಾಗೆ ಸೋಲಾರ್ ಬೇಲಿ, ಆನೆ ಕಂದಕಗಳನ್ನು ನಿರ್ಮಿಸುವುದರಿಂದ ಆನೆಗಳ ಮಾರಣ ಹೋಮವನ್ನು ತಡೆಯಬಹುದು.
ತೋಟಂಬೈಲು ಅನಂತ ಕುಮಾರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ, ನರಿಯಂದಡ ಚೆಯ್ಯಂಡಾಣೆ
ಕೊಡಗಿನಲ್ಲಿ ತೋಟಗಳಲ್ಲಿ ಬೀಡು ಬಿಡುವ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸ ಹೆಚ್ಚಾಗಿ ನಡೆಯದೆ, ಅವುಗಳನ್ನು ಚದುರಿಸುವ ಕಾರ್ಯ ಆಗುತ್ತಿದೆ. ಗುಂಪಿನಿಂದ ಬೇರ್ಪಟ್ಟ ಆನೆ ಜನವಸತಿ ಪ್ರದೇಶಗಳಲ್ಲಿ ಆಹಾರಕ್ಕಾಗಿ ಬಂದಾಗ ಅದನ್ನು ಬೆದರಿಸಿ ಓಡಿಸುವ ಕೆಲಸ ಆದಾಗ ಆನೆ ಅಚಾನಕ್ ವಿದ್ಯುತ್ ತಂತಿ ಸ್ಪರ್ಶಿಸಿ ಅಥವಾ ಹಳೆಯದಾದ ಹೂಳು ತುಂಬಿದ ಕೆರೆಗಳಲ್ಲಿ ಮುಳುಗಿ ಸಾಯುವುದು ವಿಪರ್ಯಾಸ.
ಚಿತ್ರಾ, ಕಾಫಿ ಬೆಳೆಗಾರರು, ಮಗ್ಗುಲ, ವಿರಾಜಪೇಟೆ
ಅರಣ್ಯವನ್ನು ಉಳಿಸಬೇಕು. ಮರಗಳನ್ನು ಬೆಳೆಸಬೇಕು. ಅರಣ್ಯ ಅರಣ್ಯವಾಗಿಯೇ ಇರಬೇಕು. ಅರಣ್ಯ ಇಲಾಖೆಯವರು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಅರಣ್ಯ ಇಲಾಖೆ ಜತೆ ಕೈ ಜೋಡಿಸಿ ಪರಿಸರ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಆನೆಗಳಿಗೆ ಅರಣ್ಯದಲ್ಲಿಯೇ ಆಹಾರ ದೊರೆತರೆ ಅವು ನಾಡಿಗೆ ಬರುವುದು ಕಡಿಮೆಯಾಗುತ್ತದೆ.
ಪಾವನ ರಾಮ್ ಬಿ.ಪಿ., ಅರಣ್ಯ ಇಲಾಖೆ ನಿವೃತ್ತ ಸಿಬ್ಬಂದಿ, ವಿರಾಜಪೇಟೆ
ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾವಿಗೀಡಾಗುವುದನ್ನು ತಡೆಯಲು ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಕಬ್ಬಿಣದ ವಿದ್ಯುತ್ ಕಂಬಗಳಿದ್ದಲ್ಲಿ ಗುರುತಿಸಿ ಬದಲಾಯಿಸಲು ಮತ್ತು ವಿದ್ಯುತ್ ತಂತಿಗಳು ಜೋತಾಡುತ್ತಿದ್ದಲ್ಲಿ ಬದಲಿಸಲು ಪತ್ರ ಬರೆದು ತಿಳಿಸಲಾಗಿದೆ. ಇಂಥದ್ದು ತಮ್ಮ ಗಮನಕ್ಕೆ ಬಂದರೆ ಮಾಹಿತಿ ನೀಡುವಂತೆ ಇಲಾಖೆಯ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಆಳವಾದ ಕೆರೆಗಳಿದ್ದಲ್ಲಿ ಅದನ್ನು ಗುರುತಿಸುವ ಮೂಲಕ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.