ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿ

Untitled-1
ದೊಡ್ಡಬಳ್ಳಾಪುರದ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಶಾಸಕ ಧೀರಜ್​ ಮುನಿರಾಜು ಭೂಮಿಪೂಜೆ ನೆರವೇರಿಸಿದರು. ಕ್ಯಾಪಿಟಲ್​ ಲ್ಯಾಂಡ್​ ಇನ್ವೆಸ್ಟ್​ಮೆಂಟ್​ ಸಿಇಒ ಸುಮಿತ್​ ಗೇರಾ, ಕಂಪನಿಯ ಬೆಂಗಳೂರು ಉಸ್ತುವಾರಿ ರವಿಭೂಷಣ್​, ಸಂಪರ್ಕಾಧಿಕಾರಿ ಅರ್ನಿಬನ್​ ಚೌಧರಿ, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಸೈಯದಾ ಅನಿಸಾ, ಪ್ರಾಂಶುಪಾಲೆ ದ್ರಾಾಯಿಣಿ, ನಗರಸಭೆ ಅಧ್ಯೆ ಸಮಿತ್ರಾ, ಸದಸ್ಯರಾದ ವೆಂಕಟೇಶ್​, ಹಂಸಪ್ರಿಯಾ ಇತರರು ಇದ್ದರು.
Published on

ದೊಡ್ಡಬಳ್ಳಾಪುರ : ಗ್ರಾಮೀಣ ಭಾಗದಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಮೂಲಸೌಕರ್ಯಗಳನ್ನು ಒದಗಿಸಿ ಮಕ್ಕಳ ಸಂಖ್ಯೆ ಮತ್ತು ಕಲಿಕಾ ಗುಣಮಟ್ಟ ಜಾಸ್ತಿಯಾಗಬೇಕು ಎಂಬುದು ನಮ್ಮ ಆಶಯ ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆಗೆ ಕ್ಯಾಪಿಟಲ್​ ಲ್ಯಾಂಡ್​ ಇನ್ವೆಸ್ಟ್​ಮೆಂಟ್​ ಕಂಪನಿಯ ಸಿಎಸ್​ಆರ್​ ನಿಧಿಯಡಿ ಆತ್ಯಾಧುನಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಉತ್ತಮ ಫಲಿತಾಂಶವಿದ್ದರೆ ನಾವು ದಾನಿಗಳ ಸಹಾಯ ಕೇಳಲು ಅನುಕೂಲವಾಗುತ್ತದೆ. ಹಾಗಾಗಿ ಶಿಕ್ಷಕರು ಈ ಬಗ್ಗೆ ಹೆಚ್ಚಿನ ಗಮನವಿಟ್ಟು ಉತ್ತಮ ಶಿಕ್ಷಣ ನೀಡುವತ್ತ ಜವಾಬ್ದಾರಿ ವಹಿಸಬೇಕು. ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗಬೇಕು.

ಮಕ್ಕಳ ಕಲಿಕೆಯ ಬಗ್ಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ. ಮುಖ್ಯವಾಗಿ ಬಡಮಕ್ಕಳ ಶಿಕ್ಷಣಕ್ಕೆ ಅಕ್ಷಯಪಾತ್ರೆ ಸರ್ಕಾರಿ ಶಾಲೆಯಾಗಿದೆ ಎಂಬುದನ್ನು ಮನದಟ್ಟು ಮಾಡಬೇಕು. ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಪುಕ್ಕಟೆಯಾಗಿ ನೀಡುತ್ತಿದೆ. ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

13.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ : ಸುಮಾರು 16 ಕೊಠಡಿಗಳುಳ್ಳ ಸುಸಜ್ಜಿತ ಶಾಲೆ, ಹೈಟೆಕ್​ ವಿಜ್ಞಾನ ಲ್ಯಾಬ್​, ಗ್ರಂಥಾಲಯವನ್ನು 13.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದು ಕ್ಯಾಪಿಟಲ್​ ಲ್ಯಾಂಡ್​ ಇನ್ವೆಸ್ಟ್​ ಮೆಂಟ್​ ಕಂಪನಿಯ ಸಿಇಒ ಸುನಿತ್​ ಗೇರಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net