ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು ಹೆಚ್ಚಿಸಿ

11-10-Shiva-5
ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ರಾಯಚೂರು ತಾಲೂಕಿನ ಕಲ್ಮಲಾ ಗ್ರಾ.ಪಂ. ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಕರಿಯಪ್ಪ ಅಚ್ಚೊಳ್ಳಿ, ಪದಾಕಾರಿಗಳಾದ ಇಸ್ಮಾಯಿಲ್ ಸಾಬ್, ನಾಗರಾಜ, ಹೊನ್ನಮ್ಮ, ಗೋವಿಂದ ನಾಯಕ, ಹನುಮಯ್ಯ ನಾಯಕ, ಬಸವರಾಜ, ವೀರೇಶ, ಲಿಂಗಣ್ಣ, ತಾಯಮ್ಮ, ಗಿರಿಜಾ ಇದ್ದರು.
Published on

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಗಳಿಗೆ ಹಾಗೂ ಕೂಲಿ ದರವನ್ನು 600 ರೂ.ಗೆ ಹೆಚ್ಚಿಸಬೇಕು. ಬಾಕಿಯಿರುವ ಕೂಲಿಯನ್ನು ಪಾವತಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕಲ್ಮಲಾ ಗ್ರಾ.ಪಂ. ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮುಂಗಾರು ವೈಲ್ಯದಿಂದ ಬರ ಪರಿಸ್ಥಿತಿಯಿದ್ದು, ಕೂಲಿ ಕಾರ್ಮಿಕರಿಗೆ ಯೋಜನೆಯಡಿ ಹೆಚ್ಚಿನ ಕೆಲಸ ನೀಡಬೇಕು. ಯೋಜನೆಯಡಿ ಯಂತ್ರೋಪಕರಣಗಳ ಬಳಕೆ ನಿಲ್ಲಿಸಬೇಕು. ನಗರ ಪ್ರದೇಶಕ್ಕೂ ಯೋಜನೆ ವಿಸ್ತರಿಸಬೇಕು. ಕೂಲಿಕಾರರು ಬಯಸುವ ವೇಳೆಯಲ್ಲಿ ಕೆಲಸ ನೀಡಬೇಕು.
ಎನ್‌ಎಂಎಂಎಸ್ ಆ್ಯಪ್‌ನಿಂದ ಕೂಲಿಕಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ಕೆಲಸ ಮುಗಿದ ಮೇಲೆ ಕಾಯಿಸುವುದನ್ನು ನಿಲ್ಲಿಸಬೇಕು. ಮಹಿಳೆಯರು, ಅಂಗವಿಕಲರಿಗೆ ಗಿಡಗಳಿಗೆ ನೀರು ಹಾಕುವ ಕೆಲಸ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕರಿಯಪ್ಪ ಅಚ್ಚೊಳ್ಳಿ, ಪದಾಕಾರಿಗಳಾದ ಇಸ್ಮಾಯಿಲ್ ಸಾಬ್, ನಾಗರಾಜ, ಹೊನ್ನಮ್ಮ, ಗೋವಿಂದ ನಾಯಕ, ಹನುಮಯ್ಯ ನಾಯಕ, ಬಸವರಾಜ, ವೀರೇಶ, ಲಿಂಗಣ್ಣ, ತಾಯಮ್ಮ, ಗಿರಿಜಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net