ನಿತ್ಯದ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಿ

LXR YOGA
Published on

ಲಕ್ಷೆ್ಮೕಶ್ವರ: ಯೋಗ ಜಗತ್ತಿಗೆ ಭಾರತಕೊಟ್ಟ ಶ್ರೇಷ್ಠ ಕೊಡುಗೆಯಾಗಿದ್ದು, ಯೋಗ ನಮಗೆ ನಾವೇ ಕಂಡುಕೊಳ್ಳುವ ಚಿಕಿತ್ಸೆ ಮತ್ತು ಅರೋಗ್ಯದ ಕಣಜ. ಯೋಗ ರೋಗಿಗಳಿಗೆ ಸಂಪೂರ್ಣ ಚಿಕಿತ್ಸಾ ಪದ್ಧತಿಯಾದರೆ ಯೋಗಿಗಳಿಗೆ ಸಾಧನೆಯ ಮಾರ್ಗವಾಗಿದೆ. ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಕಡಕೋಳ ಕಪ್ಪತಗಿರಿಯ ಬಸವ ಪತಂಜಲಿ ಯೋಗ ಸಮಿತಿ, ನಿಸರ್ಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ವೀರೇಶ ಗುರೂಜಿ ಹೇಳಿದರು.

ಬಸವ ಪತಂಜಲಿ ಯೋಗ ಸಮಿತಿ, ತಾಲೂಕು ಕಂದಾಯ, ಪೊಲೀಸ್ ಇಲಾಖೆ, ಪುರಸಭೆ, ಬಿಸಿಎನ್ ವಿದ್ಯಾ ಸಂಸ್ಥೆ, ಇನ್ನರ್ ವೀಲ್ ಕ್ಲಬ್, ಹಿರಿಯ ನಾಗರಿಕರ ಸಂಘ, ಕದಳಿ ವೇದಿಕೆ, ಯೋಗ ಸಾಧಕರ ಸಮಿತಿ, ಸರ್ಕಾರಿ ನೌಕರರ ಸಂಘ, ನಿವೃತ್ತ ಶಿಕ್ಷಕರ ಸಂಘ, ಪತ್ರಕರ್ತರ ಸಂಘ, ಎಫ್​ಎಂಸಿಜಿ ಡಿಸ್ಟ್ರಿಬ್ಯೂಟರ್ ಅಸೋಶಿಯೇಶನ್, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಮೂಲನಾ ಸಂಸ್ಥೆ, ವಕೀಲರ ಸಂಘ, ವೈದ್ಯರ ಸಂಘ, ಔಷಧ ವ್ಯಾಪಾರಸ್ಥರ ಸಂಘ, ಕರ್ನಾಟಕ ಗಾಮೀಣ ಹಾಗೂ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬಿಸಿಎನ್ ಸ್ಪೆಕ್ಟಮ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಏರ್ಪಾಟಾಗಿದ್ದ ಉಚಿತ ಯೋಗ ಮತ್ತು ನಿಸರ್ಗ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡಮುಕ್ತ ಮತ್ತು ಶಾಂತಿಯುತ ಬದುಕಿಗಾಗಿ ಯೋಗ ಪ್ರಾಣಾಯಾಮ ಸಾಧನವಾಗಿವೆ. ಯೋಗವು ಯಾವುದೇ ಜಾತಿ, ಧರ್ಮಕ್ಕೆ ಸೀಮತವಾಗಿಲ್ಲ. ಅದು ಜಗತ್ತಿನ ಜನರ ಆರೋಗ್ಯಕರ ಜೀವನ ಕ್ರಮವಾಗಿದೆ ಎಂದರು.

ಡಾ.ಶ್ರೀಕಾಂತ ಬೆಳವಿಗಿ ಮಾತನಾಡಿ, ಪ್ರತಿಯೊಬ್ಬರೂ ಯೋಗ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಾಗರಾಜ ಸೂರಣಗಿ, ದಶರಥ ಕೋಟೆಗೌಡರ, ಸಿ.ಆರ್. ಲಕ್ಕುಂಡಿಮಠ, ಚಂದ್ರಶೇಖರ ಪಾಟೀಲ, ವೈ.ಎಸ್.ಕೂಬಿಹಾಳ, ನಿರಂಜನ ವಾಲಿ, ನಾಗರಾಜ ಯಂಡಿಗೇರಿ, ಶಕುಂತಲಾ ವಡ್ಕಣ್ಣನವರ, ಜಯಶ್ರೀ ಹೊಸಮನಿ, ಶೈಲಾ ಆದಿ, ನಿರ್ಮಲಾ ಅರಳಿ, ರೂಪಾ ಸಂತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net