ಹೆಚ್ಚಾದ ಕೃಷಿ ವೆಚ್ಚಗಳಿಂದ ಆದಾಯ ಕ್ಷೀಣ

ಕಾನಹೊಸಹಳ್ಳಿ ಸಮೀಪದ ಹುಲಿಕೆರೆಯಲ್ಲಿ ರೈತ ಸಂಪರ್ಕ ಕೇಂದ್ರದಿಂದ ಆಯೋಜಿಸಿದ್ದ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮವನ್ನು ಸಾವಯವ ಕೃಷಿಕ ವಿಶೇಶ್ವರ ಸಜ್ಜನ್ ಉದ್ಘಾಟಿಸಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚೈತ್ರಾ, ಗ್ರಾಪಂ ಸದಸ್ಯ ಟಿ.ಗಿರೀಶ, ಕೃಷಿ ಇಲಾಖೆಯ ರಾಮಕೃಷ್ಣ, ಚನ್ನಪ್ಪ, ಅವಿನಾಶ ಇತರರಿದ್ದರು.
ಕಾನಹೊಸಹಳ್ಳಿ ಸಮೀಪದ ಹುಲಿಕೆರೆಯಲ್ಲಿ ರೈತ ಸಂಪರ್ಕ ಕೇಂದ್ರದಿಂದ ಆಯೋಜಿಸಿದ್ದ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮವನ್ನು ಸಾವಯವ ಕೃಷಿಕ ವಿಶೇಶ್ವರ ಸಜ್ಜನ್ ಉದ್ಘಾಟಿಸಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚೈತ್ರಾ, ಗ್ರಾಪಂ ಸದಸ್ಯ ಟಿ.ಗಿರೀಶ, ಕೃಷಿ ಇಲಾಖೆಯ ರಾಮಕೃಷ್ಣ, ಚನ್ನಪ್ಪ, ಅವಿನಾಶ ಇತರರಿದ್ದರು.
Published on

ಕಾನಹೊಸಹಳ್ಳಿ: ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದರೂ ಕೃಷಿಕರು ಅಭಿವೃದ್ಧಿ ಆಗುತ್ತಿಲ್ಲ. ಕೃಷಿ ಕ್ಷೇತ್ರದಲ್ಲಿ ಹೆಚ್ಚಾದ ವೆಚ್ಚಗಳಿಂದ ಆದಾಯ ಕ್ಷೀಣಿಸುತ್ತಿದ್ದು, ಖರ್ಚು ಕಡಿಮೆಯಾದರೆ ರೈತರು ಆರ್ಥಿಕ ಸಬಲರಾಗಲು ಸಾಧ್ಯ ಎಂದು ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳಿದರು.

ಹುಲಿಕೆರೆ ಮಾಲೂರು ಶರಣಪ್ಪ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರದಿಂದ ಹಮ್ಮಿಕೊಂಡಿದ್ದ ಹಸಿರಿನೊಂದಿಗೆ ಮಾತುಕತೆ ಮತ್ತು ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಹೇಗೆ ವೆಚ್ಚದಾಯಕ ಆಗುತ್ತಿದೆ ಎನ್ನುವುದನ್ನು ಅರಿಯಬೇಕು. ಭಾಗಶಃ ಶೂನ್ಯ ಬಂಡವಾಳ, ವೆಚ್ಚ ರಹಿತ ಕೃಷಿ ಮಾಡುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಆಹಾರ ಬೆಳೆ ಜತೆಗೆ ಅರಣ್ಯ ಕೃಷಿ, ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವುದು ಸೂಕ್ತ. ಸಾವಯವ ವಿಧಾನದಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಅಲ್ಲದೆ ರೈತರು ಸ್ವತಃ ಮಾರಾಟ ಮಾಡದರೆ ಕೃಷಿಕರು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಪ್ರಮುಖ ಮಾಲೂರು ಶರಣಪ್ಪ ಮಾತನಾಡಿ, ಸಾವಯವ, ನೈಸರ್ಗಿಕ ಕೃಷಿ ಮಾಡಿದರೆ ಜಮೀನಿನ ಆರೋಗ್ಯದ ಜತೆ ನಮ್ಮ ಆರೋಗ್ಯವೂ ಉತ್ತಮವಾಗಿರಲಿದೆ. ಮಳೆಯಾಶ್ರಿತ ಕೃಷಿಯಲ್ಲಿ ಬೆಳೆ ಬದಲಾವಣೆ, ಅಕ್ಕಡಿ ಸಾಲು, ಮಿಶ್ರ ಬೆಳೆ ಪದ್ಧತಿ, ಮಳೆ ನೀರು ಸಂಗ್ರಹ, ಇಂಗುವಿಕೆಗೆ, ಮರ ಆಧಾರಿತ ಕೃಷಿಗೆ ಆದ್ಯತೆ ನೀಡಬೇಕು. ಸಾವಯವ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದ ಸೂರ್ಯಕಾಂತಿ, ಹುರುಳಿ, ತೊಗರಿ ಬೆಳೆಗಳನ್ನು ವೀಕ್ಷಿಸಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚೈತ್ರಾ, ಗ್ರಾಪಂ ಸದಸ್ಯ ಟಿ.ಗಿರೀಶ, ಕೃಷಿ ಇಲಾಖೆಯ ರಾಮಕೃಷ್ಣ, ಚನ್ನಪ್ಪ, ಅವಿನಾಶ, ಕೃಷಿಕರಾದ ನಾಗಣ್ಣ, ಕಮಲಮ್ಮ, ರಮೇಶಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net