ಉಡುಪಿ: ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿಗಳು ಮತ್ತು ಕೇಂದ್ರ ಬಜೆಟ್-2025ರ ಪರಿಣಾಮಗಳ ಕುರಿತು ಫೆ.15ರಂದು ಮಧ್ಯಾಹ್ನ 2.30ಕ್ಕೆ ಉಡುಪಿ ಕಿದಿಯೂರಿನಲ್ಲಿರುವ ವಾಧವ ಕೃಷ್ಣ ಸಭಾಂಗಣದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಯಶ್‌ಪಾಲ್ ಸುವರ್ಣ ಪಾಲ್ಗೊಳ್ಳಲಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಇತ್ತೀಚಿನ ಬದಲಾವಣೆ ವಿಷಯ ಕುರಿತು ಸಿಎ ಶ್ರೀಧರ್ ಕಾಮತ್ ಮಾಹಿತಿ ನೀಡಲಿದ್ದಾರೆ. ಕೇಂದ್ರ ಬಜೆಟ್-2025 ಮತ್ತು ಭಾರತೀಯ ಆರ್ಥಿಕತೆಯ ವಿಷಯ ಕುರಿತು ಬೆಂಗಳೂರಿನ ಅರ್ಥಶಾಸಜ್ಞ ವಿಶ್ವನಾಥ ಭಟ್ ವಿಸ್ತೃತ ವಿವರ ನೀಡಲಿದ್ದಾರೆಂದು ಆರ್ಥಿಕ ಕೋಶದ ಸಂಚಾಲಕ ದಿವಾಕರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.