ಸಕಾಲಕ್ಕೆ ತೆರಿಗೆ ಪಾವತಿಸಲು ರೂಢಿಸಿಕೊಳ್ಳಿ

news
ಹೊಸಪೇಟೆಯಲ್ಲಿ ನಡೆದ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರಾದ ವಿಜಯ್ ಸಾರಥಿ, ತಿರು ಮುರುಗನಾಥನ್, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಗುತ್ತಿಗೆದಾರ ತಿರುಪತಿ ನಾಯ್ಡು, ಸಿಎ ಗುಪ್ತಾ ಇತರರಿದ್ದರು.
Published on

ಹೊಸಪೇಟೆ: ಆದಾಯ ತೆರಿಗೆ ಸಲ್ಲಿಕೆಯನ್ನು ಸರ್ಕಾರ ಪಾರದರ್ಶಕ ಹಾಗೂ ಸರಳೀಕರಣಗೊಳಿಸಿದೆ. ಹಾಗಾಗಿ ದೇಶದ ಅಭಿವೃದ್ಧಿಯಲ್ಲಿ ತೆರಿಗೆದಾರರು ಪಾಲು ಕೂಡ ಮಹತ್ವದಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿಜಯ್ ಸಾರಥಿ ಹೇಳಿದರು.

ನಗರದ ಎಂ.ಜೆ. ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ದೇಶ ಈಗ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ದೇಶದ ಬಜೆಟ್ ಗಾತ್ರವೇ 48 ಲಕ್ಷ ಕೋಟಿ ರು. ದಾಟಿದೆ. ಇದರಲ್ಲಿ ನೇರ ತೆರಿಗೆ ಹಾಗೂ ಜಿಎಸ್‌ಟಿ ಪಾತ್ರ ಹಿರಿದಾಗಿದೆ. ಒಂದು ದೇಶ ಬೆಳೆಯಬೇಕಾದರೆ ತೆರಿಗೆ ಪಾವತಿದಾರರ ಪಾತ್ರವೂ ಅತಿಮುಖ್ಯ. ಹಾಗಾಗಿ ಸಕಾಲಕ್ಕೆ ತೆರಿಗೆ ಪಾವತಿ ಮಾಡುವ ಜಾಯಮಾನವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.

ಕೇAದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಈಗಾಗಲೇ ತೆರಿಗೆ ಸಲ್ಲಿಕೆಯನ್ನು ಸರಳೀಕರಣಗೊಳಿಸಲಾಗಿದೆ. ಇನ್ನೂ ತೆರಿಗೆ ಪಾವತಿ ಸ್ಲ್ಯಾಬ್‌ಅನ್ನು ಕೂಡ ಪಾರದರ್ಶಕವಾಗಿ ಮಾಡಲಾಗಿದೆ. ಈಗ ಆನ್‌ಲೈನ್‌ನಲ್ಲೇ ತೆರಿಗೆ ಪಾವತಿ ಮಾಡಲು ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನೂ ನೋಟಿಸ್‌ಗೂ ಆನ್‌ಲೈನ್‌ನಲ್ಲೇ ಉತ್ತರಿಸಬಹುದಾಗಿದೆ. ಡಿಜಿಟಲ್ ಯುಗದಲ್ಲಿ ನಾವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇವೆ. ಹಾಗಾಗಿ ಭಾರತ ದೇಶ ಆರ್ಥಿಕ ಪ್ರಗತಿಯಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದರು.

ಆದಾಯ ತೆರಿಗೆ ಇಲಾಖೆಯ ಜಿಎಸ್‌ಟಿ ಅಧಿಕಾರಿ ತಿರು ಮುರುಗನಾಥನ್ ಮಾತನಾಡಿ, ಆದಾಯ ತೆರಿಗೆಯೊಂದಿಗೆ ಜಿಎಸ್‌ಟಿಯನ್ನು ಸಕಾಲಕ್ಕೆ ಪಾವತಿ ಮಾಡಬೇಕು. ನಾವು ಆದಷ್ಟು ನಿಯಮವನ್ನು ಪಾಲನೆ ಮಾಡಿದರೆ, ಖಂಡಿತ ಅಭಿವೃದ್ಧಿ ಹೊಂದುತ್ತೇವೆ ಎಂದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಕೆ. ಲೋಕೇಶ್, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಗುತ್ತಿಗೆದಾರ ತಿರುಪತಿ ನಾಯ್ಡು, ಸಿಎ ಗುಪ್ತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net