58.70 ಲಕ್ಷ ಉಳಿತಾಯ ಬಜೆಟ್ ಮಂಡನೆ

15 HNL
Published on

ಹೊನ್ನಾಳಿ: ಪುರಸಭಾ ಸಭಾಂಗಣದಲ್ಲಿ 2025-26ನೇ ಸಾಲಿನ ಪುರಸಭೆಯ 58.70 ಲಕ್ಷ ಮೊತ್ತದ ಉಳಿತಾಯ ಬಜೆಟ್ ಅನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.

2025-26ನೇ ಸಾಲಿನ ಎಲ್ಲ ಮೂಲಗಳಿಂದ ಹಾಗೂ ಪ್ರಸ್ತುತ ಸಾಲಿನ ಆರಂಭಿಕ ಶಿಲ್ಕು ಸೇರಿ 15.28 ಕೋಟಿ ಆದಾಯ, 14.70 ಕೋಟಿ ವೆಚ್ಚ ಮತ್ತು 58.70 ಲಕ್ಷ ಉಳಿತಾಯ ನಿರೀಕ್ಷೆ ಹೊಂದಲಾಗಿದೆ ಎಂದು ಪುರಸಭಾಧ್ಯಕ್ಷ ಮೈಲಪ್ಪ ವಿವರಿಸಿದರು.

1 ಕೋಟಿ ಕಟ್ಟಡದ ಆಸ್ತಿ ತೆರಿಗೆ, 8 ಲಕ್ಷ ಉದ್ದಿಮೆ ಪರವಾನಗಿ, 95 ಲಕ್ಷ ಮಳಿಗೆಗಳ ಬಾಡಿಗೆ, 10 ಲಕ್ಷ ಕಟ್ಟಡ ಪರವಾನಗಿ, 35 ಲಕ್ಷ ನಿವೇಶನ ಅಭಿವೃದ್ಧಿ ಶುಲ್ಕ ಸೇರಿ ವಿವಿಧ ಬಾಬ್ತುಗಳಿಂದ ಒಟ್ಟು 15.28 ಕೋಟಿ ಲಾಭವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ರಸ್ತೆ- ಚರಂಡಿ ಕಾಮಗಾರಿಗೆ 15ನೇ ಹಣಕಾಸು ಯೋಜನೆಯಿಂದ 1 ಕೋಟಿ, ಎಸ್​ಎಫ್​ಸಿ ಮುಕ್ತ ನಿಧಿ ಅನುದಾನದಿಂದ 1 ಕೋಟಿ ಹಾಗೂ ಕಚೇರಿ ಗಣಕಯಂತ್ರ ಮತ್ತು ಇತರೆ ಉಪಕರಣಗಳ ಖರೀದಿಗಾಗಿ 15 ಲಕ್ಷ, ಹೈಮಾಸ್ಡ್ ವಿದ್ಯುತ್ ದೀಪ, ಸೋಲಾರ್, ಎಲ್​ಇಡಿ ಮತ್ತು ಬೀದಿ ದೀಪಗಳ ಖರೀದಿಗಾಗಿ 48 ಲಕ್ಷ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗಾಗಿ 49 ಲಕ್ಷ ಹಾಗೂ ಹೊರಗುತ್ತಿಗೆ ನೌಕರರ ವೇತನಕ್ಕಾಗಿ 50 ಲಕ್ಷ ಸೇರಿ ಒಟ್ಟು 14.70 ಲಕ್ಷ ಖರ್ಚಿಗಾಗಿ ಮೀಸಲಿರಿಸಿದೆ ಎಂದರು.

ಇತ್ತೀಚೆಗೆ ಹೊಸದಾಗಿ ಪುರಸಭೆಗೆ ಸೇರ್ಪಡೆಯಾಗಿರುವ ದೇವನಾಯಕನಹಳ್ಳಿ ಹಾಗೂ ಹಿರೇಮಠ ಗ್ರಾಮಗಳಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಅವರ ನೇತೃತ್ವದಲ್ಲಿ ಅಭಿವೃದ್ಧಿ ಮಾಡೋಣ, ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಪುರಸಭೆ ಸದಸ್ಯ ಎಂ. ಸುರೇಶ್, ಮಾಜಿ ಅಧ್ಯಕ್ಷ ಕೆ.ವಿ. ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಸುಮಾ ಮಂಜುನಾಥ್, ಸವಿತಾ ಮಹೇಶ್ ಹುಡೇದ್, ರಂಜಿತಾ ಚನ್ನಪ್ಪ, ಬಾವಿಮನೆ ರಾಜಣ್ಣ, ಧರ್ಮಪ್ಪ, ರಾಜೇಂದ್ರ, ತನ್ವಿರ್, ಪದ್ಮಪ್ರಶಾಂತ್, ಉಷಾ ಗಿರೀಶ್, ಅನುಶಂಕರ್, ಸುಮಾ ಸತೀಶ್, ನಾಮಿನಿ ಸದಸ್ಯರಾದ ರೇವಣಸಿದ್ದಪ್ಪ ಮೂಲಿಮನೆ, ರವಿ, ಮಾದಪ್ಪ, ಚಂದ್ರಪ್ಪ, ಮುಖ್ಯಾಧಿಕಾರಿ ಲೀಲಾವತಿ, ಇಂಜಿನಿಯರ್ ದೇವರಾಜ್, ಆರೋಗ್ಯ ನಿರೀಕ್ಷಕ ಪರಮೇಶ್​ನಾಯ್್ಕ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net