ಸರ್ವರನ್ನು ಒಳಗೊಳ್ಳುವ ಚಿಂತನೆ ಅಗತ್ಯ

CTK
Published on

ಚಿತ್ರದುರ್ಗ: ಎಲ್ಲ ಸಮಾಜದವರನ್ನು ಒಳಗೊಂಡು, ಅವರ ಸಹಕಾರದೊಂದಿಗೆ ಮದಕರಿನಾಯಕ ಜಯಂತ್ಯುತ್ಸವ ಆಚರಿಸುವುದು ಸೂಕ್ತ ಎಂದು ನಗರಸಭೆ ಮಾಜಿ ಅಧ್ಯಕ್ಷ, ಯಾದವ ಸಮಾಜದ ಮುಖಂಡ ಸಿ.ಟಿ.ಕೃಷ್ಣಮೂರ್ತಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುರ್ಗವನ್ನಾಳಿದ ಪಾಳೆಗಾರರ ಪೈಕಿ ಮದಕರಿ ನಾಯಕ ಪ್ರಮುಖರು. ಇಂಥ ಮಹನೀಯರ ಜನ್ಮದಿನೋತ್ಸವವನ್ನು ಬಿ. ಕಾಂತರಾಜ್ ಬಳಗದವರು ಆಚರಿಸುತ್ತಿರುವುದು ಶ್ಲಾಘನೀಯ. ಆದರೆ, ಎಲ್ಲರೂ ಸೇರಿದರೆ ಚೆನ್ನ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ, ಚಿತ್ರದುರ್ಗವನ್ನು ಆಳಿದ ಮತ್ತೊಬ್ಬ ಪ್ರಮುಖ ಬಿಚ್ಚುಗತ್ತಿ ಭರಮಣ್ಣ ನಾಯಕನ ಪ್ರತಿಮೆ ನಿರ್ಮಿಸ ಬೇಕಿದೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಮದಕರಿ ನಾಯಕ ಸರ್ವ ಸಮುದಾಯದ ಪರ ಆಡಳಿತ ನಡೆಸಿದ ದುರ್ಗದ ಪಾಳೇಗಾರ. ಆದ್ದರಿಂದ ಎಲ್ಲ ಸಮಾಜದವರನ್ನೂ ಒಗ್ಗೂಡಿಸಿ ಜಯಂತ್ಯುತ್ಸವ ಆಚರಿಸಬೇಕು. ಈ ಕಾರ್ಯಕ್ಕೆ ನಮ್ಮ ಸಹಕಾರ ಇರಲಿದೆ ಎಂದರು.

ದಸಂಸ ಹಿರಿಯ ಮುಖಂಡ ಡಿ.ದುರುಗೇಶ್, ಮಾಜಿ ಸದಸ್ಯ ಗಾಡಿ ಮಂಜುನಾಥ್, ಮುಖಂಡರಾದ ಮಾಳೇಶಣ್ಣ, ಗರಡಿ ತಿಮ್ಮಣ್ಣ, ಜಯಣ್ಣ, ಆನಂದ್, ಮಾರುತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net