ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆ ಹಿಂದುಗಳಿಗೆ ಎಚ್ಚರಿಕೆಯ ಕರೆಗಂಟೆ

sharan
Published on

ಮಂಗಳೂರು: ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರ ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿರುವುದು ಬಹಳ ಆತಂಕಕಾರಿಯಾಗಿದೆ. ಮುಸ್ಲಿಮರ ವೋಟಿಗೋಸ್ಕರ ಹಿಂದುಳಿದ ವರ್ಗಕ್ಕೆ ಅವರನ್ನು ಸೇರಿಸಿ ಬಹುಸಂಖ್ಯಾತರಾದ ಹಿಂದೂಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದ್ದಾರೆ.

ಸರ್ಕಾರದ ಈ ನಿಲುವಿನಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ, ಸರ್ಕಾರಿ ಕೆಲಸ ನೇಮಕಾತಿಯಲ್ಲಿ ಪೊಲೀಸ್ ಇಲಾಖೆ, ಇತರೆ ಸರ್ಕಾರಿ ಸ್ವಾಮ್ಯಗಳ ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಮುಕ್ತ ಅವಕಾಶ ಕೊಟ್ಟಂತಾಗುತ್ತದೆ. ಇದರಿಂದ ಹಿಂದುಳಿದ ವರ್ಗದ ಹಿಂದುಗಳಿಗೆ ಘೋರ ಅನ್ಯಾಯವಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ದೇಶದ ಎಲ್ಲ ವರ್ಗದವರ ಸಂಪತ್ತನ್ನು ಸರ್ವೇ ಮಾಡಿ ಹಂಚಲಾಗುವುದು ಎಂದು ಕಾಂಗ್ರೆಸ್ ನಾಯಕನ ಹೇಳಿಕೆ ಬಹಳ ಗಂಭೀರವಾಗಿದೆ. ಶೇಕಡಾ 80 ಶೇ. ಇರುವ ಹಿಂದೂಗಳ ಆಸ್ತಿ ಪಾಸ್ತಿ , ಸಂಪತ್ತು ಬಲವಂತವಾಗಿ ಕಸಿದುಕೊಂಡು ಮುಸ್ಲಿಮರಿಗೆ ನೀಡುವ ಉದ್ದೇಶವಾಗಿದ್ದು , ಹಿಂದೂಗಳು ಎಚ್ಚೆತ್ತುಗೊಳ್ಳಬೇಕಾಗಿದೆ . ಹಿಂದುಗಳನ್ನು 2 ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶವಾಗಿದ್ದು, ಕಾಂಗ್ರೆಸ್‌ನ ಈ ವೋಟ್ ಬ್ಯಾಂಕ್ ರಾಜಕೀಯವನ್ನು ಹಿಂದೂಗಳು ತಿರಸ್ಕರಿಸಬೇಕಾಗಿದೆ. ಚುನಾವಣೆಯಂದು ಹಿಂದೂಗಳು 100 ಶೇ. ಮತದಾನ ಮಾಡಬೇಕಾಗಿದೆ. ಹಾಗಾಗಿ ಎಲ್ಲ ಹಿಂದೂಗಳು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಿ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕಾಗಿ ತಮ್ಮಲ್ಲಿ ವಿಶ್ವ ಹಿಂದೂ ಪರಿಷದ್ ವಿನಂತಿಸಿದೆ ಎಂದು ಶರಣ್ ಪಂಪುವೆಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net