ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ; ಮಳೆ ಹಾನಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲ

22 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಳೆಯಿಂದಾಗುವ ಹಾನಿ ನಿರ್ವಹಣೆಗೆ ಪ್ರತಿ ಅಽಕಾರಿ ಸನ್ನದ್ಧರಾಗಿರಬೇಕು. ಎಲ್ಲ ಹಂತದ ಅಽಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು. ಈಗ ಆಗಿರುವ ಹಾನಿ ನಿರ್ವಹಣೆ ಮತ್ತು ಸಂಭವನೀಯ ಹಾನಿ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಸ್ಥಳದಲ್ಲಿ ನಿಂತು ಫೋಟೊ ತೆಗೆದು ನನಗೆ ಕಳುಹಿಸಬೇಕು. ನಿರ್ಲಕ್ಷ÷್ಯ ವಹಿಸುವವರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಅಂದಾಜು 25,000 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿದ ಸಚಿವ ಲಾಡ್, ಇನ್ನೂ 3- 4 ವಾರ ಮಳೆಯಾಗುವ ಸಾಧ್ಯತೆ ಇದೆ. ಬೆಳೆ, ಮನೆ ಹಾನಿ, ಜನ- ಜಾನುವಾರು ಹಾನಿಯಾದರೆ ಕೂಡಲೇ ಸ್ಪಂದಿಸಬೇಕು. ತಹಸೀಲ್ದಾರರು, ತಾ.ಪಂ. ಇಒಗಳು ಸ್ಥಳ ಪರಿಶೀಲನೆ ಮಾಡಿ ಮೇಲಽಕಾರಿಗಳಿಗೆ ವರದಿ ನೀಡಬೇಕು ಎಂದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಕುಂದಗೋಳ ತಾಲೂಕಿನಲ್ಲಿ ಶೇಂಗಾ, ಸೋಯಬೀನ್, ಮೆಣಸಿನಕಾಯಿ ಬೆಳೆಗಳು ಹಾಳಾಗಿವೆ. ಬಿತ್ತನೆ ಮಾಡಿದ ಹಿಂಗಾರು ಕಡಲೆ ಬೆಳೆಯೂ ಹಾಳಾಗಿದೆ. ಮಳೆ ಹಾನಿಯ ಪುನರ್ ಸರ್ವೇ ನಡೆಯಬೇಕು ಎಂದು ಒತ್ತಾಯಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೆಲ ವರ್ಷಗಳ ಹಿಂದೆ ಮನೆ ಹಾನಿ ಫಲಾನುಭವಿಗಳ ಆಯ್ಕೆಯಲ್ಲಿ ರಾಜಕೀಯ ಒತ್ತಡ ನಡೆದಿತ್ತು. ಕೆಲವೆಡೆ ಸೇಡಿನ ರಾಜಕಾರಣ ಮಾಡಲಾಗಿತ್ತು. ಅದು ಮುಂದುವರಿಯಬಾರದು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪರಿಹಾರ ದೊರಕಿಸಿಕೊಡಬೇಕು ಎಂದು ಅಽಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿ ಪರಿಶೀಲನೆ ವೇಳೆ ಸ್ಥಳೀಯ ಮುಖಂಡರು, ರೈತ ಸಂಘಟನೆಗಳು, ರೈತಪರ ಹೋರಾಟಗಾರರು ಮತ್ತು ಜನಪ್ರತಿನಿಽಗಳಿಗೆ ಮಾಹಿತಿ ನೀಡಿ ಆಹ್ವಾನಿಸಬೇಕು. ಬೆಳೆ ವಿಮೆ ನೋಂದಣಿಗೆ ಇನ್ನಷ್ಟು ಪ್ರಚಾರ ಕೈಗೊಳ್ಳಬೇಕು ಎಂದು ಸಚಿವ ಲಾಡ್ ಕೃಷಿ- ತೋಟಗಾರಿಕೆ ಇಲಾಖೆ ಅಽಕಾರಿಗಳಿಗೆ ತಿಳಿಸಿದರು.

ಶಾಸಕರಾದ ಅಬ್ಬಯ್ಯ ಪ್ರಸಾದ, ಎಂ.ಆರ್. ಪಾಟೀಲ, ಜಿಲ್ಲಾಽಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಟಿ.ಕೆ. ಸ್ವರೂಪ, ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ವೇದಿಕೆಯಲ್ಲಿದ್ದರು.

ನಗರ ಸೌಂದರ್ಯೀಕರಣ ಮಾಡಿ:

ಗ್ರಾಮೀಣ ಪ್ರದೇಶ ಮತ್ತು ರಸ್ತೆ ಬದಿಯಲ್ಲಿ ಸಸಿ ನೆಟ್ಟರೂ ನಿರ್ವಹಣೆ ಇಲ್ಲ. ಹೀಗಾಗಿ ಅವಳಿನಗರದ ಸಿಎ ನಿವೇಶನಗಳು ಮತ್ತು 357 ಎಕರೆ ವಿಸ್ತೀಣದಲ್ಲಿರುವ ಉದ್ಯಾನಗಳಲ್ಲಿ ಸಸಿ ನೆಡಬೇಕು. ಇದರಿಂದ ಜನರಿಗೆ ಉತ್ತಮ ಗಾಳಿ ಸಿಗುತ್ತದೆ. ಜತೆಗೆ ನಗರ ಸೌಂದರ್ಯೀಕರಣ ಮತ್ತು ಮಾಡಿದ ಕಾಮಗಾರಿಯಾದರೂ ಕಣ್ಣಿಗೆ ಕಾಣುತ್ತದೆ ಎಂದು ಅರಣ್ಯ ಅಽಕಾರಿಗಳಿಗೆ ಸಚಿವ ಲಾಡ್ ಹೇಳಿದರು. ಇದಕ್ಕೆ ಸಿಎಸ್‌ಆರ್ ಅಡಿ ಅಗತ್ಯ ಅನುದಾನ ಕೊಡಿಸಲು ನೆರವಾಗಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net