

ಹುಕ್ಕೇರಿ: ಜಾತ್ಯತೀತ ಮನೋಭಾವದ ಇಂಚಗೇರಿ ಸಂಪ್ರದಾಯ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಹೊರವಲಯದ ಅವಜೀಕರ ಆಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಭಕ್ತರಿಗೆ ಅನುಕೂಲಕ್ಕೆ ಹುಕ್ಕೇರಿಯ ಕ್ಯಾರಗುಡ್ಡದ ಸಮರ್ಥ ಸದ್ಗುರು ಅವಜೀಕರ ಧ್ಯಾನ ಯೋಗಾಶ್ರಮ ಮಠದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ೧೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಆಶ್ರಮದ ಮಲ್ಲಪ್ಪ ಮಹಾರಾಜರು ಮತ್ತು ಅಭಿನವ ಮಂಜುನಾಥ ಶ್ರೀಗಳು ಅನುದಾನ ಬಿಡುಗಡೆ ಪತ್ರ ಸ್ವೀಕರಿಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಲಖನ್ ಜಾರಕಿಹೊಳಿ ಅವರೇ ಉದ್ಘಾಟನೆ ನೆರವೇರಿಸಬೇಕೆಂದು ಆಶಿಸಿದರು.
ಮುಖಂಡರಾದ ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಎಂಎಲ್‌ಸಿ ಆಪ್ತ ಸಹಾಯಕ ಸದಾನಂದ ಕಲಾಲ ಇತರರಿದ್ದರು.