

ಅಥಣಿ ಗ್ರಾಮೀಣ: ಸಮಾಜಕ್ಕೆ ಸಮಾನತೆಯ ತತ್ತ್ವ ಬೋಧಿಸಿದ ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಕೊಡುಗೆ ಅಪಾರ ಎಂದು ತುಂಗಳದ ಶಿವಲಿಂಗ ಶರಣರು ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭೂಕೈಲಾಸ ಮಂದಿರದಲ್ಲಿ ಅವಜೀಕರ ಮಹಾರಾಜರ 26ನೇ ಪುಣ್ಯಸ್ಮರಣೋತ್ಸವ ಸಮಾರಂಭ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ, ಮತ, ಪಂಥವೆನ್ನದೆ ಸರ್ವರೂ ಸಮಾನರೆಂದು ಇಂಚಗೇರಿ ಮಠದ ಅಧ್ಯಾತ್ಮ ಸಂಪ್ರದಾಯದ ತಿಳಿಸುತ್ತದೆ. ಸಮಾಜದ ಸೌಹಾರ್ದ ಸಂರಕ್ಷಿಸುವಲ್ಲಿ ಮಠ ಮಾದರಿಯಾಗಿದೆ ಎಂದರು.
\ಭೂಕೈಲಾಸ ಮಂದಿರದ ಪೀಠಾದ್ಯಕ್ಷ ಮಹಾದೇವ ಮಹಾರಾಜರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಜೀಕರ ಮಹಾರಾಜರ ಸಮತಾವಾದ ಎಲ್ಲರಿಗೂ ಆದರ್ಶವಾಗಿದೆ ಎಂದರು. ಸದ್ಗುರುಗಳು ದಾಸಬೋಧ ಪೂಜೆ ನೆರವೇರಿಸಿದರು.
ಅಪ್ಪಾಸಾಬ ಅಡಹಳ್ಳಿ ವಾಚಿಸಿದರು. ಪ್ರಕಾಶ ಮಹಾರಾಜರು, ಪಿ.ಎಸ್. ಜನಗೊಂಡ, ಆನಂದ ಕುಲಕರ್ಣಿ, ಬಸಪ್ಪ ಗುಮಟಿ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಕಲ್ಲಪ್ಪ ಅರಟಾಳ, ಆತ್ಮಾರಾಮ ಜಾಧವ, ಲಗಮಣ್ಣ ಶೇಗುಣಸಿ ಇತರರಿದ್ದರು.