

ತೆಲಸಂಗ: ಸಮಾಜಕ್ಕೆ ಸಮಾನತೆಯ ತತ್ತ್ವ ಬೋಧನೆ ಸಾರುವ ಜತೆಗೆ ಅಧ್ಯಾತ್ಮ ಸಂಪ್ರದಾಯಕ್ಕೆ ಇಂಚಗೇರಿ ಮಠದ ಕೊಡುಗೆ ಅಪಾರವಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಸಮೀಪದ ಕನ್ನಾಳ ಗ್ರಾಮದ ಗಿರೀಶ ಆಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 15 ಲಕ್ಷ ರೂ. ಮೊತ್ತದ ಸಮುದಾಯ ಭವನ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಕುಂದ ಮಹಾರಾಜರು ಮಾತನಾಡಿ, ಪಾರಮಾರ್ಥ, ತತ್ತ್ವ ಬೋಧನೆ ಹಾಗೂ ಆಧ್ಯಾತ್ಮಿಕ ಚಿಂತನೆ ಜತೆಗೆ ಸಾಮಾಜಿಕ ಜಾಗೃತಿಗೆ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಸ್ಥಳೀಯ ಬಸವಲಿಂಗ ಸ್ವಾಮೀಜಿ, ಶಂಕ್ರಪ್ಪ ಮಹಾರಾಜರು, ವಿವೇಕಾನಂದ ಹಳಿಂಗಳಿ ಮಹಾರಾಜರು, ವಕೀಲ ಅಮೋಘ ಖೊಬ್ರಿ, ಯಂಕಣ್ಣ ಅಸ್ಕಿ, ನಾನಾಗೌಡಾ ಪಾಟೀಲ, ಶೇಖರ ವಳಸಂಗ, ರಘು ದೊಡ್ಡನಿಂಗಪ್ಪಗೋಳ, ಅಶೋಕ ಮರನೂರ, ಅಪ್ಪಾಸಾಹೇಬ ಇಸರಗೊಂಡ, ಸಂಗಪ್ಪ ನೇಮಗೌಡ, ಮಾಯಪ್ಪ ಶೇಡ್ಯಾಳ ಇತರರಿದ್ದರು. ಪ್ರಕಾಶ ಇಸರಗೊಂಡ ನಿರೂಪಿಸಿದರು.