ನಿಲ್ಲದ ಸರಣಿ ಕಳ್ಳತನ, ದಿನ ಬಿಟ್ಟು ದಿನ ಅಂಗಡಿ, ಮನೆಗಳಿಗೆ ಕನ್ನ, ವಾರದ ಅಂತರದಲ್ಲಿ ಮೂರು ಪ್ರಕರಣ

5dbp1 crime
Published on

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ದಿನೇದಿನೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾರದ ಅಂತರದಲ್ಲಿ ಮನೆ, ನಾಲ್ಕು ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಶುಕ್ರವಾರ ರಾತ್ರಿ ಮತ್ತೆ ನಾಲ್ಕು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಶಟರ್ ಮುರಿದು ಬಟ್ಟೆ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದ ಬಟ್ಟೆಗಳು ಹಾಗೂ 40 ಸಾವಿರ ರೂ. ದೋಚಿದ್ದಾರೆ. ಬಳಿಕ ಹಾರ್ಡ್‌ವೇರ್ ಅಂಗಡಿಗೆ ನುಗ್ಗಿ, ಸಿಸಿ ಕ್ಯಾಮರಾದ ಸಂಪರ್ಕ ತುಂಡರಿಸಿ, ಪೈಪ್ ಮತ್ತಿತರ ವಸ್ತುಗಳನ್ನು ದೋಚಿದ್ದಾರೆ.

ಗೋಡೆ ಕೊರೆದು ಮತ್ತೊಂದು ಅಂಗಡಿಗೆ ಕನ್ನ ಹಾಕಿದ್ದು, ಟೈಲ್ಸ್ ಹಾಗೂ ನಗದನ್ನು ಕದ್ದೊಯ್ದಿದ್ದಾರೆ. ನಾಲ್ಕೂ ಪ್ರಕರಣಗಳು ನಗರ ಠಾಣೆಯಲ್ಲಿ ದಾಖಲಾಗಿವೆ.

ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸರಣಿ ಕಳ್ಳತನಗಳು ಭಯದ ವಾತಾವರಣ ನಿರ್ಮಿಸಿದ್ದು ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಬೇಕು ಎಂದು ಪಟ್ಟಣದ ನಿವಾಸಿ ರಾಜಘಟ್ಟ ರವಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net