ನಿಲ್ಲದ ಆನ್ ಲೈನ್ ವಂಚನೆ, ನಿರಂತರ ಪ್ರಕರಣ ದಾಖಲು

Untitled
Published on

ಚಿಕ್ಕಬಳ್ಳಾಪುರ: ಆನ್ ಲೈನ್‌ನಲ್ಲಿ ಅಪರಿಚಿತರ ಮಾತನ್ನು ನಂಬಿಕೊಂಡು ಹಣವನ್ನು ಕಳೆದುಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆ ದಳ ಠಾಣೆಯಲ್ಲಿ ಪ್ರತ್ಯೇಕ ಎರಡು ದೂರು ದಾಖಲಾಗಿದೆ.
ಬಾಗೇಪಲ್ಲಿ ಪಟ್ಟಣದ ತೌಹೀದ್ ಅಹಮದ್ (24) ಎಂಬುವರು ಟೆಲಿಗ್ರಾಮ್‌ನಲ್ಲಿ ಬಂದ ಹಣ ಹೂಡಿಕೆಯ ಸಂದೇಶವನ್ನು ನೋಡಿಕೊಂಡು, ಸಲಹೆಯನ್ನು ಪಾಲಿಸಿದ್ದು ಬ್ಯಾಂಕ್ ಖಾತೆಯಿಂದ 1.56 ಲಕ್ಷ ರೂ ಆನ್ ಲೈನ್ ಮೂಲಕ ಅಪರಿಚಿತರಿಗೆ ವರ್ಗಾವಣೆಯಾಗಿದೆ.
ಗೌರಿಬಿದನೂರು ನಗರದ ಮುನೇಶ್ವರ ಬಡಾವಣೆಯ ತಮೀರ್ಜಸನ್‌ಗೆ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತರು, ಕ್ರೆಡಿಟ್ ಕಾರ್ಡ್ ಸಮಸ್ಯೆ ಹೆಸರು ಹೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಆಧಾರದ ಮೇಲೆ 1,91,083 ರೂ ಲಪಾಟಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಪೊಲೀಸ್ ಇಲಾಖೆ ಜಾಗೃತಿ*
ಆನ್ ಲೈನ್ ವಂಚನೆಯ ಬಗ್ಗೆ ವ್ಯಾಪಕವಾಗಿ ಪೊಲೀಸ್ ಇಲಾಖೆಯು ಜಾಗೃತಿ ಮೂಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ವಂಚನೆಯ ನಾನಾ ವಿಧಗಳು, ಜನರು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳು, ಬ್ಯಾಂಕ್ ಮತ್ತು ಠಾಣೆಗೆ ದೂರು ನೀಡುವುದು ಸೇರಿದಂತೆ ಮಹತ್ವದ ಹಲವು ವಿಚಾರಗಳ ಬಗ್ಗೆ ತಿಳಿಸುತ್ತಿದೆ. ಆದರೂ ವಂಚನೆಯ ಪ್ರಕರಣಗಳು ನಿಲ್ಲುತ್ತಿಲ್ಲ. ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ನಿರ್ಲಕ್ಷ್ಯಕ್ಕೆ ಜನರು ಮತ್ತು ಹೆಚ್ಚಿನ ದೂರುಗಳಿಗೆ ಪೊಲೀಸರು ತಲೆ ನೋವು ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net