

ಹುಳಿಯಾರು: ಪರಿಶಿಷ್ಟ ವರ್ಗದ ಯುವತಿ ಇತರ ವರ್ಗದ ಯುವಕನನ್ನು ಮದುವೆಯಾದಲ್ಲಿ 3 ಲಕ್ಷ ರೂ. ಹಾಗೂ ಪರಿಶಿಷ್ಟ ವರ್ಗದ ಯುವಕ ಇತರ ವರ್ಗದ ಯುವತಿಯನ್ನು ಮದುವೆಯಾದಲ್ಲಿ 2.5 ಲಕ್ಷ ರೂ. ಪೋತ್ಸಾಹ ಧನ ದೊರೆಯುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಧರಮೂರ್ತಿ ತಿಳಿಸಿದರು
ಹುಳಿಯಾರು ಹೋಬಳಿಯ ಮತ್ತಿಟ್ಟ ಗ್ರಾಪಂನಿಂದ ಮಾದಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಹೆಚ್ಚು ಪರಿಶಿಷ್ಟ ವರ್ಗದ ಜನಾಂಗವಿರುವ ಹಳ್ಳಿಗಳನ್ನು ಕೇಂದ್ರೀಕರಿಸಿ ವಿವಿಧ ಸೌಲಭ್ಯಗಳ ಅರಿವು ಹಾಗೂ ಅಹವಾಲು ಸ್ವೀಕಾರ ಕಾರ್ಯಮದಲ್ಲಿ ಮಾತನಾಡಿ, 1ರಿಂದ 8ನೇ ತರಗತಿವರೆಗೂ ಸಮುದಾಯದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ ಹಾಗೂ ಸರ್ಕಾರದ ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮತ್ತಿಟ್ಟ ಪಿಡಿಒ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪರಿಶಿಷ್ಟರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಆಯಾ ಗ್ರಾಮದಲ್ಲೇ ಒದಗಿಸಬೇಕೆಂದು ಸೂಚಿಸಿದೆ. ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಡಾ.ತ್ರಿಮೂರ್ತಿ ಮಾತನಾಡಿ, ಇತ್ತೀಚೆಗೆ ಸಿಖಲ್ ಸೆಲ್ ಎನಿಮಿಯಾ ಕಾಯಿಲೆ ಜಾಸ್ತಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೌಷ್ಟಿಕ ಆಹಾರದ ಜತೆಗೆ ಸೊಪ್ಪು, ತರಕಾರಿ, ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವಿಸಿದಲ್ಲಿ ರೋಗ ಹತೋಟಿಗೆ ಬರುವುದೆಂದು ತಿಳಿಸಿದರು.ಆಹಾರ ಇಲಾಖೆಯಿಂದ ಆಹಾರ ನಿರೀಕ್ಷಕರಾದ ಪ್ರಜ್ವಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೌಮ್ಯ, ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಇಲಾಖೆಯಿಂದ ಬ್ಯಾಂಕ್ಗಳ ಪ್ರತಿನಿಧಿಯಾಗಿ ಆರ್.ಎಂ.ಕುಮಾರಸ್ವಾಮಿ ಅವರು ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು.ಮತ್ತಿಟ್ಟ ಗ್ರಾಪಂ ಅಧ್ಯಕ್ಷ ನಗಿನಾಭೀ, ಸದಸ್ಯರಾದ ಸಂತೋಷ್ ಕುಮಾರ್, ರಾಜಲಕ್ಷಿ$್ಮ, ಸುವರ್ಣಮ್ಮ ಉಪಸ್ಥಿತರಿದ್ದರು.