ಪಾಪಾಸುಕಳ್ಳಿ ಬೆಳೆಯಲು ಪ್ರೋತ್ಸಾಹಧನ

product-500x500
Published on

ತುಮಕೂರು : ಜಿಲ್ಲೆಯು ಹೆಚ್ಚಿನ ಉಷ್ಣಾಂಶ ಹೊಂದಿದ್ದು, ನೀರಿನ ಅಭಾವವಿರುವ ಕಾರಣಕ್ಕೆ ಈ ಹವಾಗುಣಕ್ಕೆ ಹೊಂದಿಕೊಳ್ಳುವ ಡ್ರಾೃಗನ್ ಪ್ರೂಟ್ಸ್(ಪಾಪಸುಕಳ್ಳಿ) ಬೆಳೆಗೆ ತೋಟಗಾರಿಕೆ ಇಲಾಖೆ ಪ್ರೋತ್ಸಾಹ ನೀಡುತ್ತಿದೆ.

ಡ್ರ್ತ್ಯಾಗನ್ ಪ್ರೋಟ್ ಸಹ ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆಯಾಗಿದ್ದು, ಕನ್ನಡದಲ್ಲಿ ಇದಕ್ಕೆ ಪಾಪಾಸುಕಳ್ಳಿ ಎಂಬ ಹೆಸರಿದೆ. ಗಿಡ ಬೆಳೆದು ಹಣ್ಣು ಬಿಟ್ಟ ನಂತರ ಇದೊಂದು ರೀತಿ ಟ ಸರ್ಪದ ರೂಪದಲ್ಲಿ ಕಾಣಿಸುವ ಕಾರಣಕ್ಕೆ ‘ಡ್ರ್ತ್ಯಾಗನ್ ಪ್ರುಟ್’ ಎನ್ನಲಾಗುತ್ತದೆ. ಈ ಹಣ್ಣಿಗೆ ಹೊರ ರಾಷ್ಟ್ರ ಹಾಗೂ ಪಂಚತಾರ ಹೋಟೆಲ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಶ್ರೀಮಂತ ಹಣ್ಣು ಅಂತ ಕರೆಯುತ್ತಾರೆ, ಈ ಹಣ್ಣು ಕಡಿಮೆ ಸಕ್ಕರೆ ಅಂಶ ಹಾಗೂ ಹೆಚ್ಚಿನ ಕಬ್ಬಿಣಂಶ ಹೊಂದಿದ್ದು ಮಲೇಶಿಯಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಈ ಹಣ್ಣಿನಿಂದ ಹಲವಾರು ಉಪಯೋಗಗಳಿದ್ದು ತಾಜಾ ಹಣ್ಣು ಸೇವನೆಯೂ ಒಂದು, ಐಸ್‌ಕ್ರೀಮ್‌ಗಳಲ್ಲಿ ಇತರ ಹಣ್ಣುಗಳೊಂದಿಗೆ ಉಪಯೋಗಿಸಬಹುದು ಅಲ್ಲದೆ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಇತ್ತರೆ ರೋಗಿಗಳಿಗೂ ಹಣ್ಣು ರಾಮಬಾಣ.

ಈ ಹಣ್ಣನ್ನು ಒಣ ಭೂಮಿಯ 38 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಹಾಗೂ ಹೆಚ್ಚಾಗಿ ಬಿಸಿಲಿರುವ ಹೊರಗಣ ಪ್ರದೇಶದಲ್ಲೂ ಬೆಳೆಯಬಹುದು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಡ್ರಾಗನ್ ಫ್ರೂಟ್ ಪ್ರದೇಶ ವಿಸ್ತರಣೆ ಕಾಮಗಾರಿಯಡಿ ಎಸ್ಸಿ, ಎಸ್ಟಿ, ಸ್ತ್ರೀ ಪ್ರಧಾನ ಕುಟುಂಬಗಳು, ಬಡತನ ರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳ, ವಿಕಲಚೇತನ ಪ್ರಧಾನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳಿಗೆ ಈ ಹಣ್ಣನ್ನು ಬೆಳೆಯಲು ಸಹಾಯಧನ ನೀಡಲಾಗುತ್ತಿದೆ. ಹಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಬಹುದು.

ಡ್ರಾೃಗನ್ ಹಣ್ಣಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು ತುಮಕೂರು ಜಿಲ್ಲೆಯ ಹವಾಗುಣ ಈ ಹಣ್ಣು ಬೆಳೆಯಲು ಸೂಕ್ತವಾಗಿದೆ. ರೈತರು ಲಾಭಗಳಿಸಲು ಈ ಹಣ್ಣನ್ನು ಬೆಳೆಯಲು ಆಸಕ್ತಿ ತೋರಿದರೆ ಇಲಾಖೆ ಸಹಾಯಧನ ನೀಡಲಿದ್ದು ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಿ, ಮಾಹಿತಿ ಪಡೆಯಬಹುದು. ರಘು ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net