

ಶಿಗ್ಗಾಂವಿ: ಅಯೋಧ್ಯೆಯಲ್ಲಿ ಜ. 22ರಂದು ಜರುಗುವ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪವಿತ್ರ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ಪಟ್ಟಣದ ವಿವಿಧ ವಾರ್ಡ್ಗಳ ಮನೆ ಮನೆಗೆ ವಿತರಿಸುವ ಅಭಿಯಾನ ನಡೆಯಿತು.
ನಗರದ ವಿವಿಧ ದೇವಸ್ಥಾನಗಳಲ್ಲಿ ಮಂತ್ರಾಕ್ಷತೆ, ಆಹ್ವಾನ ಪತ್ರಿಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು ಸ್ವಯಂಪ್ರೇರಿತರಾಗಿ ಪಕ್ಷಭೇದ ಮರೆತು ಮನೆ ಮನೆಗೆ ತೆರಳಿ ವಿತರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಸದಸ್ಯ ದಯಾನಂದ ಅಕ್ಕಿ, ಪರುಶರಾಮ ಸೊನ್ನದ, ಪ್ರಶಾಂತ ಬಡ್ಡಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಮುದುಕಪ್ಪ ವನಹಳ್ಳಿ, ಭಾರತೀಶ ಬಳಿಗಾರ, ಶಿವಾನಂದ ವನಹಳ್ಳಿ, ಪ್ರಸನ್ನ ಹೂಗಾರ, ಮುತ್ತು ಯಲಿಗಾರ, ಬಸವರಾಜ ಕಲ್ಲಪ್ಪನವರ, ಸಂಕೇತ ಬಳ್ಳಕ್ಕನವರ, ಮುತ್ತು ಮಡ್ಲಿಕರ, ಇತರರಿದ್ದರು.